ಕಡಬ: ತೀವ್ರ ಅಸೌಖ್ಯದಿಂದ ಬಳಲುತ್ತಿರುವ ಕೋಡಿಂಬಾಳ ಗ್ರಾಮದ ಕೊರತ್ತಿಗುರಿ ನಿವಾಸಿ ಹರೀಶ್ ನಾಯ್ಕ (42) ಅವರಿಗೆ ಊರಿನ ಮಿತ್ರರು ಹಾಗೂ ದಾನಿಗಳ ಸಹಕಾರದಿಂದ ಸಂಗ್ರಹಿಸಲಾದ ರೂ. 33,500 ಧನಸಹಾಯವನ್ನು ಫೆಬ್ರವರಿ 13ರಂದು ಕಡಬ ಬೈಲಂಗಡಿಯಲ್ಲಿ ಹಸ್ತಾಂತರಿಸಲಾಯಿತು.

ಕುಶಾಲಪ್ಪ ನಾಯ್ಕ ಮತ್ತು ರಾಧಾ ದಂಪತಿಗಳ ಪುತ್ರರಾದ ಹರೀಶ್ ನಾಯ್ಕ ಅವರು ಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆ ವೆಚ್ಚ ಭರಿಸಲು ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಬೈಲಂಗಡಿ ಹಾಗೂ ರೋಹಿತ್ ಗೌಡ ಪಣೆಮಜಲು ಅವರ ನೇತೃತ್ವದಲ್ಲಿ ಊರಿನ ಮಿತ್ರರು ಧನಸಹಾಯ ಸಂಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಪೂಜಾರಿ ಬೈಲಂಗಡಿ, ರೋಹಿತ್ ಗೌಡ ಪಣೆಮಜಲು, ಕೃಷ್ಣಪ್ಪ ನಾಯ್ಕ ಪುಳಿಕುಕ್ಕು ಸೇರಿದಂತೆ ಪ್ರಮುಖರಾದ ಗಂಗಯ್ಯ ನಾಯ್ಕ (ಇನ್ಸ್‌ಪೆಕ್ಟರ್, ಪಾಂಡೇಶ್ವರ ಮಂಗಳೂರು), ಕೊರಗಪ್ಪ ಗೌಡ ಕಲ್ಲರ್ಪೆ ಪಿಜಕ್ಕಳ, ಶೇಖರ ಪೂಜಾರಿ ಬೈಲಂಗಡಿ, ಬಾಲಕೃಷ್ಣ ನಾಯ್ಕ ಉಜಿರುಪಾದೆ, ಚಂದ್ರಕಾಂತ ಮಜ್ಜೆಗುಡ್ಡೆ, ಆನಂದ ಗೌಡ ಕೋಂಕ್ಯಾಡಿ, ಸುದೀರ್ ಪಣೆಮಜಲು, ಮುರಳಿ ಎಂ. ಮೂರಾಜೆ, ಶಾಮ್ ತೋಮಸ್ ಪಿಜಕ್ಕಳ, ನಿವೃತ್ತ ಶಿಕ್ಷಕ ಪೂವಪ್ಪ ಗೌಡ ಪಿಜಕ್ಕಳ, ಬಾಬು ಗೌಡ ಬಚಿರಡ್ಕ, ಸುಂದರ ಮುಗೇರ ಪಿಜಕ್ಕಳ, ಸೋಮಪ್ಪ ಗೌಡ ಪಟ್ನಾ, ನಾರಾಯಣ ನೇಲ್ಯಡ್ಕ, ಶೇಷಪ್ಪ ಗೌಡ ಕೇವಳ, ಶೇಖರ ಗೌಡ ಪಾಲೋಳಿ, ರಾಘವ ಆಚಾರಿ ಪಾಲೋಳಿ, ಹರಿಪ್ರಸಾದ್ ಪಣೆಮಜಲು, ಹರೀಶ್ ನೇಲ್ಯಡ್ಕ, ಕೊರಗಪ್ಪ ಮುಗೇರ ಪಿಜಕ್ಕಳ, ಗಂಗಾಧರ ಗೌಡ ಕುತ್ಯಾಡಿ, ಸಂಜಯ್ ಮೂರಾಜೆ, ಸೂರಪ್ಪ ಗೌಡ ಕೆರೆಮುದೇಲು, ಸಂಜೀವ ನಾಯ್ಕ ಕೊರತ್ತಿಗುರಿ, ಆನಂದ ಪೂಜಾರಿ ಪಿಜಕ್ಕಳ, ಈಶ್ವರ ಗೌಡ ಅಮೈ, ಗಣೇಶ್ ಗೌಡ ಪಣೆಮಜಲು, ಸುಂದರ ಗೌಡ ಪಾಲೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ಥಳೀಯರ ಸಹಕಾರದಿಂದ ಸಂಗ್ರಹಿಸಿದ ಈ ನೆರವು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ಧೈರ್ಯ ನೀಡಿದೆ. ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದ್ದು, ದಾನಿಗಳು ಸಹಕರಿಸುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *