ಕಡಬ: ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಕಾನದಬಾಗಿಲಿನ ಹಿರಿಯ ಪ್ರಗತಿಪರ ಕೃಷಿಕ ಬಾಬು ಗೌಡ (90) ಅವರು ಫೆಬ್ರವರಿ 14ರಂದು ಅಲ್ಪಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಶ್ರಮ ಹಾಗೂ ನಿಷ್ಠೆಯಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಗ್ರಾಮದಲ್ಲಿ ಗೌರವ ಪಡೆದಿದ್ದರು. ಸರಳ ಜೀವನ ಶೈಲಿ ಮತ್ತು ಸಮಾಜಮುಖಿ ಚಟುವಟಿಕೆಗಳಿಂದ ಅವರು ಸ್ಥಳೀಯರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.
ಮೃತರು ಪುತ್ರರಾದ ಕಲ್ಲುಗುಡ್ಡೆ ರೇಷ್ಮ ಹಾರ್ಡ್‌ವೇರ್ ಅಂಗಡಿ ಮಾಲಕರಾದ ಲಿಂಗಪ್ಪ ಗೌಡ (ಕಾನದಬಾಗಿಲು), ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುಬ್ರಾಯ ಗೌಡ ಹಾಗೂ ಪುತ್ರಿ ಪಾರ್ವತಿ ಅವರನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಗ್ರಾಮಸ್ಥರು ಹಾಗೂ ಬಂಧುಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *