ಕಡಬ: ಕಡಬ ತಾಲ್ಲೂಕಿನ ಪಿಜಕ್ಕಳ ವ್ಯಾಪ್ತಿಯ ನಿವಾಸಿ, ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ (81 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 16ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಸಂತಪ್ಪ ಗೌಡರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಸರಳ ಸ್ವಭಾವ, ಶಿಸ್ತಿನ ಬೋಧನೆ ಮತ್ತು ಸಮಾಜಮುಖಿ ಚಿಂತನೆಗಾಗಿ ಅವರು ಪ್ರದೇಶದಲ್ಲಿ ಗೌರವ ಪಡೆದಿದ್ದರು.




ಅವರು ಕುಟುಂಬದವರನ್ನು ಹಾಗೂ ಅಪಾರ ಬಂಧು-ಬಳಗ, ಶಿಷ್ಯವೃಂದವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
ಇವರ **ಅಂತಿಮ ವಿಧಿವಿಧಾನವನ್ನು ದಿನಾಂಕ 17.02.2026 ಮಂಗಳವಾರ ರಂದು ರಾತ್ರಿ 8 ಗಂಟೆಗೆ ಸರಿಯಾಗಿ ಪಿಜಕ್ಕಳ** ಇಲ್ಲಿ ನಡೆಸಲಾಗುವದು.ಇವರ ಅಂತಿಮ ದರ್ಶನವನ್ನು ಪಡೆಯಲು ಇಂದು ಸಂಜೆ 4 ಘಂಟೆಯ ವರೆಗೆ ( ದಿನಾಂಕ 16.02.2026) ಪಿಜಕ್ಕಳ ನಿವಾಸದಲ್ಲಿ ಹಾಗೂ ನಾಳೆ ( ದಿನಾಂಕ 17.02.2026 ಮಂಗಳವಾರ )ಬೆಳಗ್ಗೆ 8 ರಿಂದ ಸಂಜೆ 5ಗಂಟೆ ವರೆಗೆ JMJ ಹಾಸ್ಪಿಟಲ್ ಕಡಬ ಇಲ್ಲಿ ಅವಕಾಶ ಮಾಡಿ ಕೊಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.


