ಉಪ್ಪಿನಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿಯವರನ್ನು ಇ.ಡಿ ನಿರ್ದೇಶನಾಲಯವು ಸುಳ್ಳು ಕೇಸುಗಳನ್ನು ದಾಖಲಿಸಿ ಕಳೆದ ವರ್ಷ ಬಂಧಿಸಲಾಗಿತ್ತು, ಇದೀಗ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.



ಈ ಪ್ರಯುಕ್ತ ಎಸ್.ಡಿ.ಪಿ.ಐ ಕಾರ್ಯಕರ್ತರು ಉಪ್ಪಿನಂಗಡಿ ಬಸ್ ನಿಲ್ದಾಣದ ಸರ್ಕಲ್ ಬಳಿ ಸಂಭ್ರಮಾಚರಣೆ ನಡೆಸಿದರು. ಸುಳ್ಳು ಕೇಸುಗಳು , ಅನ್ಯಾಯಗಳು ಯಾವತ್ತೂ ಜಯಗಳಿಸಿದ ಇತಿಹಾಸವಿಲ್ಲ, ನ್ಯಾಯದ ಧ್ವನಿಗಳು ಒಂದಲ್ಲ ಒಂದು ದಿನ ಇಲ್ಲಿ ಪ್ರತಿಧ್ವನಿಸಲಿದೆ ಎಂಬುದಕ್ಕೆ ಈ ಜಾಮೀನು ಸಾಕ್ಷಿಯಾಗಿದೆ ಎಂದು ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಸಮಿತಿ ಸದಸ್ಯರೂ, ಗ್ರಾಮ ಪಂಚಾಯತ್ ಸದಸ್ಯರೂ ಆದ ರಶೀದ್ ಮಠ ರವರು ಹೇಳಿದರು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಝಕರಿಯಾ ಕೊಡಿಪ್ಪಾಡಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಮೈಸಿದ್ ಇಬ್ರಾಹಿಂ, , ಮಠ ಬ್ರಾಂಚ್ ಅಧ್ಯಕ್ಷರಾದ ಮಜೀದ್ ಮಠ, ಉಪ್ಪಿನಂಗಡಿ ಬ್ರಾಂಚ್ ಅಧ್ಯಕ್ಷರಾದ ಹಸೈನಾರ್ ಸಿಟಿ ಅಲ್ಲದೇ ಪಕ್ಷದ ಕಾರ್ಯಕರ್ತರು, ಹಿತೈಸಿಗಳು ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ಹಂಚಲಾಯಿತು.




