ವಿಟ್ಲ:ರಕ್ಷ ಪರೀಕ್ಷೆ ನಡೆಸಿ ನೀಡಲಾದ ಪ್ರಯೋಗಾಲಯದ ವರದಿಯಲ್ಲಿ, ರಕ್ತದ ಪ್ಲೇಬ್ಲೆಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ವಿಚಾರಿಸಲು ಹೋದಾಗ ಉಡಾಫೆಯ ಉತ್ತರ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಂತ್ರಸ್ತ ವ್ಯಕ್ತಿ ವಿಟ್ಲ ಚಂದಳಿಕೆಯಲ್ಲಿರುವ ರಕ್ಷಾ ಕ್ಲಿನಿಕ್ ಆಂಡ್ ಲ್ಯಾಬೋರೇಟರಿಯ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದಾರೆ.

ಚಿನ್ಮಯ್ ಕೃಷ್ಣ.ಮಾಲಕ




ಬಂಟ್ವಾಳ ತಾಲೂಕು ಬದನಾಜೆ ಸಮೀಪದ ನಿವಾಸಿಯಾಗಿರುವ ಕಿಯಾನ್ ಹರ್ಬಲ್ ಸೆಂಟರ್ ಕಂಪೆನಿಯ ಮಾಲೀಕ ಡಾ.ಶರತ್ ಶೆಟ್ಟಿಯವರು ದೂರು ನೀಡಿದ್ದರು.



ನಾನು ವಿಟ್ಲ-ಕಬಕ ರಸ್ತೆಯ ಚಂದಳಿಕೆ ಪರಿಸರದ ರಕ್ಷಾ ಕ್ಲಿನಿಕ್ ಆಂಡ್ ಲ್ಯಾಬೋರೇಟರಿಯಲ್ಲಿ ಸಿಬಿಸಿ ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ. ಬೆಳಗ್ಗೆ ಸುಮಾರು 10.50 ಗಂಟೆಗೆ ನಾನು ರಕ್ತ ನೀಡಿದ್ದು, ಅದರ ಸಂಪೂರ್ಣ ರಿಪೋರ್ಟ್ ನನಗೆ 11.03 ಗಂಟೆಗೆ ವಾಟ್ಸಪ್ ಮೂಲಕ ಕಳಿಸಿದ್ದಾರೆ.ಆ ರಿಪೋರ್ಟ್ನಲ್ಲಿ ಹಿಮೋಗ್ಲೋಬಿನ್ 14 ತೋರಿಸುತ್ತಿದೆ ಹಾಗೆಯೇ ಪ್ಲೇಟೈಟ್ 18000 ತೋರಿಸುತ್ತಿದೆ.ಆ ರಿಪೋರ್ಟ್ನ್ನು ನೋಡಿ ಕೂಡಲೇ ರಕ್ಷಾ ಕ್ಲಿನಿಕ್ಗೆ ಕಾಲ್ ಮಾಡಿ ನೀವು ಮಾಡಿರುವಂತಹ ರಿಪೋರ್ಟ್ ಸರಿ ಇದೆಯೇ ಎಂದು ಕೇಳಿದಾಗ ಅಲ್ಲಿಯ ಸಿಬ್ಬಂದಿ, ನಾವು ಮಾಡಿರುವ ರಿಪೋರ್ಟ್ ಸರಿ ಇದೆ. ನೀವು ಬೇರೆ ಎಲ್ಲಿ ಸಹ ಮಾಡಿಸಿ ತೊಂದರೆ ಇಲ್ಲ. ನಾವು ನಮ್ಮ ವೈದ್ಯರಲ್ಲಿ ತೋರಿಸಿ ನಿಮಗೆ ರಿಪೋರ್ಟ್ ವಾಟ್ಸಾಪ್ ಮುಖಾಂತರ ಕಳಿಸಿದ್ದೇವೆ ಎಂದು ಹೇಳಿದ್ದರು.ನನಗೆ ಆ ರಿಪೋರ್ಟ್ ನೋಡಿ ಅತಿ ಹೆಚ್ಚು ವ್ಯತ್ಯಾಸ ಕಂಡು ಬಂದಿದ್ದು ನಾನು ಕೂಡಲೇ 11.30ರ ಸುಮಾರಿಗೆ ವಿಟ್ಲದಲ್ಲಿರುವ ಧನ್ವಂತರಿ ಹಾಗೂ ವಿಕೇರ್ ಲ್ಯಾಬ್ನಲ್ಲಿ ಪೇಟೈಟ್ ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ.ಆ ರಿಪೋರ್ಟ್ನಲ್ಲಿ ನನಗೆ ವಿಕೇರ್ ಲ್ಯಾಬ್ನಲ್ಲಿ 1 ಲಕ್ಷ ಮತ್ತು ಧನ್ವಂತರಿ ಲ್ಯಾಬೋರೇಟರಿಯಲ್ಲಿ 1.13ಲಕ್ಷ ಪ್ಲೇಬ್ಲೆಟ್ ತೋರಿಸಿದೆ. ಸರಿಯಾದ ಮಾಹಿತಿ ಸಿಕ್ಕಿದ್ದು ಅದನ್ನು ನೋಡಿ ನಾನು ಹಿಂತಿರುಗಿ ಚಂದಳಿಕೆ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ಬಂದು, ನನ್ನ ರಿಪೋರ್ಟ್ಗೆ ಸಹಿ ಹಾಕಿ ಕೊಡಿ ಎಂದು ಕೇಳಿದಾಗ ಅಲ್ಲಿಯ ವೈದ್ಯರು ನಿರಾಕರಿಸಿ,ವಿಟ್ಲದಲ್ಲಿ ಕ್ಲಿನಿಕ್ ಮಾಡಲು ಟಿಹೆಚ್ಓ ಹಾಗೂ ಡಿಹೆಚ್ಓ ಅವರನ್ನು ಸೆಟ್ಟಿಂಗ್ ಮಾಡಿದ್ದೇವೆ ನೀವು ಯಾರಿಗೆ ಬೇಕಾದರೂ ಕಂಪ್ಲೆಂಟ್ ಮಾಡಿ ನಾವು ಹೆದರಲ್ಲ ಎಂದು
ಹೇಳಿದ್ದಾರೆ.ಇದನ್ನು ಕೇಳಿ ನನಗೆ
ಆಘಾತವಾಗಿತ್ತು.ಹಾಗೆಯೇ
ನನಗೆ ಬೇರೆ ಉಪಾಯವಿಲ್ಲದೆ ವಿಟ್ಲ ಪೋಲಿಸ್ ಠಾಣಾ
ಅಧಿಕಾರಿಗೆ ದೂರು ನೀಡಲು ಬಂದೆ.ನಂತರ ಪೊಲೀಸ್
ಅಧಿಕಾರಿಗಳು ರಕ್ಷಾ ಕ್ಲಿನಿಕ್ ಆಂಡ್ ಲ್ಯಾಬೋರೇಟರಿ
ಮಾಲೀಕರಾದ ಚಿನ್ಮಯ್ ಅವರಲ್ಲಿ ಮಾತನಾಡಿದರು.ಚಿನ್ಮಯ್ ಅವರು ಪೊಲೀಸರಿಗೆ, ನಿಮಗೆ
ಸಾಧ್ಯವಾದರೆ ನಮ್ಮ ಕ್ಲಿನಿಕ್ನಿಂದ ಒಂದು ಸೀಲ್ ಅಥವಾ ಸಹಿ ಹಾಕಿಸಿ ಎಂದು ಚಾಲೆಂಜ್ ಮಾಡಿದ್ದರು.ಈ
ಹಿನ್ನೆಲೆಯಲ್ಲಿ ನಾನು ಮೇಲಾಧಿಕಾರಿಗಳಿಗೆ ದೂರು
ನೀಡಿದ್ದೇನೆ.ಲ್ಯಾಬೊರೇಟರಿ ಸಿಬ್ಬಂದಿಗಳು ನಮ್ಮಲ್ಲಿ ತುಂಬಾ ಉಡಾಫೆಯಿಂದ ಮಾತನಾಡಿದ್ದು, ಅವರು ಯಾರನ್ನು ಸೆಟ್ಟಿಂಗ್ ಮಾಡಿದ್ದಾರೆ ಅನ್ನೋದು ನನಗೆ ಸರಿಯಾಗಿ ತಿಳಿಯಲಿಲ್ಲ.ಆದರೆ ಅದು ನನಗೆ ಅಗತ್ಯವಿಲ್ಲ ತಕ್ಷಣವೇ ಮೇಲ್ಕಂಡ ದೂರಿಗೆ ಸರಿಯಾದ ರೀತಿಯಲ್ಲಿ ಕ್ರಮ
ತೆಗೆದುಕೊಂಡು ರಕ್ಷಾ ಕ್ಲಿನಿಕ್ ಆಂಡ್ ಲ್ಯಾಬೋರೇಟರಿಯನ್ನು
ಸಂಪೂರ್ಣವಾಗಿ ಬಂದ್ ಮಾಡಬೇಕು. ಬಂದ್ ಮಾಡದಿದ್ದರೆ ಶಿಫಾರಸ್ಸು ಮಾಡಿದ ಅಕಾರಿಗಳ ವಿರುದ್ಧ
ಲೋಕಾಯುಕ್ತರಿಗೆ ಮತ್ತು ಆರೋಗ್ಯ ಸಚಿವರಿಗೆ ದೂರು
ನೀಡುತ್ತೇವೆ’ ಎಂದು ಡಾ.ಶರತ್ ಶೆಟ್ಟಿಯವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.





