ಪುತ್ತೂರು: ಮುಂಡೂರು ಗ್ರಾಮದ ಕಲ್ಲಮದಲ್ಲಿ ಪರಿಶಿಷ್ಟ ಪಂಗಡದ 12 ಮನೆಗಳಿಗೆ ಮತ್ತು ಇತರೆ 4 ಮನೆಗಳಿಗೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ರಾಜಕೀಯ ನೇತಾರರು, ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು, ಯಾವುದೇ ಸ್ಪಂದನೆ ಇಲ್ಲ. ಹಾಗಾಗಿ ಫೆ.25ಕ್ಕೆ ಪ್ರತಿಭಟನೆ ನಡೆಸಿ ಫೆ.30ರೊಳಗೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯಿಂದ ರಸ್ತೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.






ಕಲ್ಲಮ ಪರಿಶಿಷ್ಟ ಪಂಗಡಕ್ಕೆ ಸೇರಿದ 12 ಮನೆಗಳು ಮತ್ತು ಇತರ 4 ಮನೆಗಳಿಗೆ ಕರೆಮನೆ ಕಟ್ಟೆಯಿಂದ 300 ಮೀಟರ್ ಸಂಪರ್ಕ ರಸ್ತೆ ಬೇಕಾಗಿದೆ. ಅಲ್ಲಿ ಕಾಲುದಾರಿ ಊರ್ಜಿತದಲ್ಲಿದೆ. ಆದರೆ ಸಮಪರ್ಕ ರಸ್ತೆ ಇಲ್ಲ. ಅನಾರೋಗ್ಯ ಪೀಡಿತರು, ತುರ್ತು ಸಂದರ್ಭ ಹೋಗಲು ವಾಹನದ ಹೋಗಲು ಸಾಧ್ಯವಿಲ್ಲ. ಆ ಭಾಗ ಭೂಮಸೂದೆ ಕಾಯ್ದೆಯಲ್ಲಿ ಜಾಗ ಪಡೆದವರಿಬ್ಬರು ರಸ್ತೆಗಾಗಿ ಜಾಗ ಬಿಟ್ಟುಕೊಡುತ್ತಿಲ್ಲ. ಕಾನೂನು ಪ್ರಕಾರ ಭೂಮಸೂದೆ ಜಾಗದಲ್ಲಿ ನೀರು, ರಸ್ತೆ ಮೂಲಭೂತ ಸೌಕರ್ಯಕ್ಕೆ ಅವಕಾಶ ನೀಡಬೇಕೆಂದಿದೆ. ಈ ಕುರಿತು ಅನೇಕ ಬಾರಿ ಸಹಾಯಕ ಕಮೀಷನರ್, ಜಿಲ್ಲಾಧಿಕಾರಿ ಮತ್ತು ರಾಜಕೀಯ ನಾಯಕರು, ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಸ್ಪಂದನೆಯಿಲ್ಲ. ಹಾಗಾಗಿ ಫೆ. 25ರಂದು ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಬಳಿಕ ಫೆ. 30ರೊಳಗೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು. ಅಹಿತಕರ ಘಟನೆ ನಡೆದಲ್ಲಿ ರಾಜಕೀಯ ನಾಯಕರು, ಅಧಿಕಾರಿಗಳು ಹೊಣೆಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕೊರಗಪ್ಪ ನಾಯ್ಕ ಕಲ್ಲಮ, ಜಗದೀಶ್, ಜಯಶ್ರೀ, ಲಕ್ಷ್ಮೀ ಉಪಸ್ಥಿತರಿದ್ದರು.



