ಕಡಬ, ಫೆ.18: ಕಡಬ–ಪಂಜ ಮುಖ್ಯ ರಸ್ತೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಬುಧವಾರ ಚಾಲನೆ ನೀಡಿದರು. ಕಡಬದ ಸರಸ್ವತಿ ವಿದ್ಯಾಲಯದ ಸಮೀಪ ತೆಂಗಿನಕಾಯಿ ಒಡೆಯುವ ಮೂಲಕ ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಒಟ್ಟು ಎರಡು ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈಗಾಗಲೇ ಒಂದು ಕೋಟಿ ರೂ. ವೆಚ್ಚದಲ್ಲಿ ಕಡಬ ಭಾಗದಿಂದ ಕಲ್ಲಂತಡ್ಕ ತನಕ ರಸ್ತೆ ಹೆಚ್ಚು ಹಾಳಾಗಿದ್ದ ಮೂರು ಕಡೆಗಳನ್ನು ಎತ್ತರಿಸಿ ಕಾಂಕ್ರೀಟ್ ಹಾಕಲಾಗಿದ್ದು, ಕೆಲವು ಕಡೆಗಳಲ್ಲಿ ಡಾಮರು ಹಾಕಿಸುವ ಕೆಲಸ ಪೂರ್ಣಗೊಂಡಿದೆ ಎಂದರು.

ಉಳಿದ ಒಂದು ಕೋಟಿ ರೂ. ಅನುದಾನದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದ್ದು, ಈ ತಿಂಗಳ ಕೊನೆಯೊಳಗೆ ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ತನಕ ರಸ್ತೆ ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಒಂತ್ರಡ್ಕದಿಂದ ಪಂಜದ ತನಕ ಲೋಕೋಪಯೋಗಿ ಇಲಾಖೆಯ ನಿರ್ವಹಣಾ ಅನುದಾನದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ ಟೇಪಿಂಗ್ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದರು. ಸುಳ್ಯ ಲೋಕೋಪಯೋಗಿ ಇಲಾಖೆಯ ಗೋಪಾಲ್ ಅವರು ಕಾಮಗಾರಿಯ ಬಗ್ಗೆ ಪೂರಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಪ್ರಸನ್ನ ಮಾರ್ತ, ರಾಕೇಶ್ ರೈ ಕೆಡಂಜಿ, ಹರೀಶ್ ಕಂಜಿಪಿಲಿ, ವೆಂಕಟ ದಂಬೆಕೋಡಿ, ಪ್ರದೀಪ್ ರೈ ಮನವಳಿಕೆ, ವಿನಯ್ ಕುಮಾರ್ ಕಂದಡ್ಕ, ಪ್ರಕಾಶ್ ಎನ್. ಕೆ,ಅಶೋಕ್ ಕುಮಾರ್ ಪಿ, ರಾಜೇಶ್ ಎನ್ ಎಸ್, ಸುಬ್ರಹ್ಮಣ್ಯ,ಗಿರೀಶ್ ಎ.ಪಿ, ದಯಾನಂದ ಪೊಯ್ಯೇತಡ್ಕ, ರಘುರಾಮ ನಾಯಕ ಕುಕ್ಕೇರಾರಬೆಟ್ಟು, ಶಿವಪ್ರಸಾದ್ ರೈ ಮೈಲೇರಿ, ರವಿರಾಜ್ ಶೆಟ್ಟಿ ಕಡಬ, ಉಮೇಶ್ ಶೆಟ್ಟಿ, ಸಾಯಿ ರಾಮ್, ಸವಿತಾ ಭಟ್ ಪಾಜೋವು, ಧನಂಜಯ ಕೊಡಂಗೆ, ಗುತ್ತಿಗೆದಾರ ಗಿರೀಶ್ ಬೆಳ್ತಂಗಡಿ ಮತ್ತಿತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *