ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ವಿಶೇಷ ತಂಡವು ಅಂತರ್ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಒಟ್ಟು ರೂ.38,42,000 ಮೌಲ್ಯದ ಮಾದಕ ವಸ್ತು, ವಾಹನ, ಮಾರಕಾಸ್ತ್ರ, ಮೊಬೈಲ್ ಫೋನ್ಗಳು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು
ಮುಹಮ್ಮದ್ ಅಜ್ಮಲ್ ಸಿ @ ಅಜ್ಜು (30), ಚೆನ್ನಿಲೊಟ್ಟು, ವೇಲಂ, ವಡಕರ ತಾಲೂಕು, ಕೋಝಿಕೋಡ್, ಕೇರಳ
ಇಸ್ಮಾಯಿಲ್ (28), ಮುಂಡಿಕುಂಞಲ್, ಚರುಕಾಟುರ್ ಗ್ರಾಮ, ಮಾನಂದವಾಡಿ, ವಯನಾಡ್, ಕೇರಳ
ಸಂಶೀರ್ (27), ಕಹ್ನೀರಾ, ಪಾಲೇರಿ ಗ್ರಾಮ, ಕೋಝಿಕೋಡ್, ಕೇರಳ


ವಶಪಡಿಸಿಕೊಂಡ ವಸ್ತುಗಳು
ರೂ.5,38,800 ಮೌಲ್ಯದ 53.58 ಗ್ರಾಂ MDMA
ರೂ.18 ಲಕ್ಷ ಮೌಲ್ಯದ ಮಹೀಂದ್ರ ಕಂಪನಿಯ ಥಾರ್ ವಾಹನ
ಮಾರಕಾಸ್ತ್ರ
ರೂ.1,52,000 ಮೌಲ್ಯದ ಮೊಬೈಲ್ ಫೋನ್ಗಳು
ನಗದು ರೂ.10,000






ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 25/2026 ರಂತೆ NDPS Act 1985 ಕಲಂ 8C, 22(C), 29 ಹಾಗೂ Arms Act 25(1B)(B) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಪ್ರಮುಖ ಆರೋಪಿ ಮೇಲೆ ಅನೇಕ ಪ್ರಕರಣಗಳು
ಮುಖ್ಯ ಆರೋಪಿ ಅಜ್ಮಲ್ ಕೇರಳ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದನು. ಕೋಝಿಕೋಡ್, ಕಣ್ಣೂರು ಹಾಗೂ ವಯನಾಡ್ ಜಿಲ್ಲೆಗಳಲ್ಲಿ ಈತನ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದನೆಂದು ತಿಳಿದುಬಂದಿದೆ.
ಇದೇತನ ಪುತ್ತೂರು ಗ್ರಾಮಾಂತರ ಠಾಣೆಯ ಅ.ಕ್ರ. 04/2026 ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದು, ಆ ಪ್ರಕರಣದಲ್ಲಿ 16.26 ಗ್ರಾಂ MDMA (ಮೌಲ್ಯ ರೂ.1,64,000) ಹಾಗೂ ರೂ.11 ಲಕ್ಷ ಮೌಲ್ಯದ ಎರಡು ಕಾರುಗಳು ವಶಪಡಿಸಿಕೊಳ್ಳಲಾಗಿತ್ತು.


ಒಟ್ಟು ವಶಪಡಿಸಿಕೊಂಡ ಸೊತ್ತು
ಎರಡು ಪ್ರಕರಣಗಳನ್ನು ಸೇರಿಸಿ:
69.84 ಗ್ರಾಂ MDMA (ರೂ.6,98,000 ಮೌಲ್ಯ)
ರೂ.29 ಲಕ್ಷ ಮೌಲ್ಯದ 3 ವಾಹನಗಳು
ರೂ.2 ಲಕ್ಷ ಮೌಲ್ಯದ ಮೊಬೈಲ್ಗಳು
ನಗದು ರೂ.44,000
ಒಟ್ಟು ಅಂದಾಜು ಮೌಲ್ಯ: ರೂ.38,42,000
ಈ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ಡಿ.ಎಸ್.ಬಿ ಪೊಲೀಸ್ ನಿರೀಕ್ಷಕ ನಂದಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿದಿದ್ದು, ಇಂತಹ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

