
ಪುತ್ತೂರು: ಬಿಹಾರ ಚುನಾವಣೆಯ ಆರಂಭಿಕ ಫಲಿತಾಂಶಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. “ಬಿಜೆಪಿಗೆ ಭರ್ಜರಿ ಗೆಲುವು” ಎಂದು ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದರು.

ವಿಶೇಷವೆಂದರೆ, ಸಂಭ್ರಮಾಚರಣೆಯಲ್ಲಿ ಪಟಾಕಿ ಬಳಸದೆ ಸರಳ ರೀತಿಯಲ್ಲಿ ವಿಜಯೋತ್ಸವ ನಡೆಸಲಾಯಿತು. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನ ಹಾಗೂ ದೆಹಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆ ಯಾವುದೇ ಪಟಾಕಿ ಸಿಡಿಸದೇ ಸಂತೋಷ ಹಂಚಿಕೊಂಡರು.
ಬಿಜೆಪಿ ಶಿಬಿರದಲ್ಲಿ ಸಂಯಮಿತ ಆದರೆ ಉತ್ಸಾಹಭರಿತ ಸಂಭ್ರಮ ಮುಂದುವರಿದಿದೆ.
ಗೆಲುವಿನ ಸಂಭ್ರಮಚರಣೆ ವೇಳೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ಥ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಗ್ರಾಮಾಂತರ ಮಂಡಳ ದಯಾನಂದ ಶೆಟ್ಟಿ ಉಜಿರೆಮಾರ್, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ್ ಜೈನ್, ಶಶಿಧರ್ ನಾಯಕ್,ಸಂತೋಷ್ ರೈ ಕೈಕಾರ, ಹರಿಪ್ರಸಾದ್ ಯಾದವ್,ನಾಗೇಂದ್ರ ಬಾಳಿಗ, ಹರೀಶ್ ಬಿಜಾರ್ತೆ,ನಿತೇಶ್ ಶಾಂತಿವನ, ದೀಕ್ಷಾ ಪೈ, ವಸಂತಲಕ್ಷ್ಮಿ, ಹಿರಿಯ ಮುಖಂಡರಾದ ಅಪ್ಪಯ್ಯ ಮಣಿಯಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಲೋಕೇಶ್ ಹೆಗ್ಡೆ, ಚಂದ್ರಶೇಖರ ರಾವ್ ಬಪ್ಪಳಿಗೆ,ರಾಜೇಶ್ ಬನ್ನೂರ್, ರಾಧಾಕೃಷ್ಣ ಬೋರ್ಕರ್, ಬುಡಿಯಾರ್ ರಾಧಾಕೃಷ್ಣ ರೈ, ಸತೀಶ್ ನಾಯ್ಕ್ ಯುವ ಮುಖಂಡ ಶಿಶಿರ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.



