ಪುತ್ತೂರು: ನಗರದ ತೆಂಕಿಲದಲ್ಲಿರುವ ಪುಷ್ಪಾ ಸ್ಕ್ವೇರ್ ಕಟ್ಟಡದಲ್ಲಿ ರತ್ನಶ್ರೀ ಕ್ಯಾಟರರ್ಸ್ ಅಂಡ್ ಅರೇಂಜರ್ಸ್ ಸಂಸ್ಥೆಯ ನೂತನ ಕಚೇರಿಯ ಭವ್ಯ ಉದ್ಘಾಟನಾ ಸಮಾರಂಭ ಫೆಬ್ರವರಿ 20ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

25 ವರ್ಷಗಳ ಯಶಸ್ವಿ ಪಯಣವನ್ನು ಸಂಭ್ರಮಿಸುತ್ತಿರುವ ಸಂಸ್ಥೆ, ಗ್ರಾಹಕರ ವಿಶ್ವಾಸ ಮತ್ತು ಬೆಂಬಲದೊಂದಿಗೆ ಸೇವಾ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಹೊಸ ಕಚೇರಿಯನ್ನು ಪ್ರಾರಂಭಿಸಿ ಸೇವಾ ವಿಸ್ತರಣೆಗೆ ಮುಂದಾಗಿದೆ.
ಸಂಸ್ಥೆಯ ವತಿಯಿಂದ ಆಯೋಜಿಸಲಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು, ಆತಿಥಿಗಳು ಹಾಗೂ ಸ್ನೇಹಿತರು ಭಾಗವಹಿಸಲಿದ್ದಾರೆ.

ರತ್ನಶ್ರೀ ಗ್ರೂಪ್ಸ್‌ನ ಜಯಂತ ಶೆಟ್ಟಿ ಕಂಬಳತಡ್ಡ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸಿ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *