ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ದಿಯ ಕಾರ್ಯಗಳು ಇದೀಗ ವೇಗ ಪಡೆದುಕೊಂಡಿದ್ದು, ಇದರ ಅಂಗವಾಗಿ ದೇವಸ್ಥಾನದ ರಾಜಾಂಗಣದಲ್ಲಿರುವ ನಾಲ್ಕು ಮತ್ತು ಕರೆಯ ಎಡಬದಿಯ ಕಟ್ಟೆಗಳನ್ನು ತೆರವುಗೊಳಿಸಿ, ಕಂದನಾಯಕರ ಕಟ್ಟೆಯ ತೆರವು ವೇಳೆ ದೊರಕಿದ ಆಕರ್ಷಕ ಪುರಾತನ ತಾಮ್ರದ ಶಾಸನವನ್ನು ಬೆಳಕಿಗೆ ತಂದಿದ್ದಾರೆ.

ಉತ್ತರವಾಸ ಸಂಭರ್ ಶ್ರೀ ದೇವರ ರಾಜಾಂಗಣದಲ್ಲಿ ಕಂದನಾಯಕರ ಕಟ್ಟೆಯಲ್ಲಿ ಕೊತ್ತು ಕಟ್ಟೆ ಪೂಜೆ ಸ್ಮರಣಾರ್ಥ ಬಲಿಕ ಪೀಠೆ ಸವಾರಿ ಹೊಗುವಾಗ ಅಡಗಿದ್ದ ತಾಮ್ರದ ದಿವನದ ಕಟ್ಟೆಯನ್ನು ಕೊತ್ತ ಚಂದ್ರಮಂಡಲ ರದ್ದು, ಕರಿ ಉತ್ಸವಕ್ಕೆ ತೆರಳುವದು ಸಂಪ್ರದಾಯವಿದೆ. ಇದೀಗ ರಾಜಾಂಗಣದ ಕಟ್ಟೆಗಳನ್ನು ಪುನರ್‌ನವೀಕರಣಗೊಳಿಸುವ ವೇಳೆ ತಾಮ್ರದ ಶಾಸನವನ್ನು ಶುಚಿಗೊಳಿಸಿ ಪರಿಶೀಲಿಸಿದಾಗ, ಸಂ 1908ನೇ ಇಸವಿಯ ಏಪ್ರಿಲ್ ತಿಂಗಳಲ್ಲಿ ಈ ಕಟ್ಟೆಯನ್ನು ಕಂದನಾಯಕರ ಕಟ್ಟೆಸಿದ ಉಲ್ಲೇಖ ಪತ್ತೆಯಾಗಿದೆ.
ಇದೀಗ ತಾಮ್ರದ ಶಾಸನವನ್ನು ತೆಗೆಯಲಾಗಿದೆ. ಹಾಗಾಗಿ ದೇವಸ್ಥಾನದ ರಾಜಾಂಗಣದಲ್ಲಿ ಇರುವ ಪ್ರತಿಯೊಂದು ಕಟ್ಟೆಯೂ ಇತಿಹಾಸವನ್ನೊಳಗೊಂಡಿರುವುದು ಸ್ಪಷ್ಟವಾಗಿದೆ. 2013ರಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲಿ ಇತಿಹಾಸದ ಹಲವು ಕುರುಹುಗಳು ಪತ್ತೆಯಾಗಿದ್ದನ್ನು ನೆನಪಿಸಬಹುದು.

ಈ ಪುರಾತನ ಶಾಸನದ ಪತ್ತೆ ದೇವಸ್ಥಾನದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಎತ್ತಿ ಹಿಡಿದಿದ್ದು, ಭಕ್ತರಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತಿದ್ದು, ಪರಂಪರೆ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವತ್ತ ಸಮಿತಿಯು ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *