ಪ್ರತ್ತೂರು: ಕಳೆದ 25 ವರ್ಷಗಳಿಂದ ಆಹಾರೋದ್ಯಮದಲ್ಲಿ ತೊಡಗಿಸಿಕೊಂಡಿರುವ ರತ್ನ ಶ್ರೀ ಗ್ರೂಪ್‌ನ ನೂತನ ಕಚೇರಿಯನ್ನು ಫೆ.21 ರಂದು ತೆಂಕಿಲದ ಪುಷ್ಪ ಸ್ಪೇರ್ ಕಂಪ್ಲೇಸ್ ಅಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪುತ್ತೂರಿನಲ್ಲಿ ಕ್ಯಾಟರಿಂಗ್ ಮೂಲಕ ರತ್ನಶ್ರೀ ಗ್ರೂಪ್ ತನ್ನದೇ ಆದ ಭಾವು ಮೂಡಿಸಿದೆ. 1999ರಲ್ಲಿ ಸಣ್ಣದಾಗಿ ಪ್ರಾರಂಭವಾದ ಕ್ಯಾಂಟೀನ್ ಇಂದು ಹೆಮ್ಮರವಾಗಿ ಬೆಳೆದಿದೆ. ಗಂಜೆ ಊಟದಿಂದ ಪ್ರಾರಂಭವಾಗಿ ಇದೀಗ ಬಿರಿಯಾನಿ ಸೇರಿದಂತೆ ಉನ್ನತ ಮಟ್ಟದ ಖಾದ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ. ರತ್ನ * ಕ್ಯಾಂಟೀನ್, ಹೊಟೇಲ್‌ನಲ್ಲಿ ಗುಣಮಟ್ಟ, ಶುಚಿ, ದುಂತಿಗೆ ಒತ್ತು ನೀಡಲಾಗುತ್ತಿದೆ. ಇದೀಗ ತನ್ನದೇ ಆದ ಕಚೇರಿಯನ್ನು ಕೂಡ ಪ್ರಾರಂಭಿಸಿದ್ದು, ಇವರ ಉದ್ಯಮವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ಶ್ರೀ ರಾಮಕೃಷ್ಣ ಶಾಲೆಯ ಸಂಚಾಲಕ ಕಾವು ಹೇಮನಾಥ್ ಶೆಟ್ಟಿ ಮಾತನಾಡಿ, ವ್ಯವಹಾರದಲ್ಲಿ ಸ್ನೇಹಪರತೆ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ರತ್ನವೋ ಗ್ರೂಪ್ ಮಾಲಕ ಜಯಂತ್ ಶೆಟ್ಟಿ ಅವರು ಎಲ್ಲರೊಂದಿಗೆ ಬೆರೆಯುವ ಕ್ಯಾಟರರ್ಸ್ ಆಂಡ್ ಎರೇಂಜರ್ಸ್, ಎರಡು ಕ್ಯಾಂಟೀನ್‌ಗಳು ಹಾಗೂ ಒಂದು ಹೊಟೇಲ್ ಅನ್ನು ಜಯಂತ್ ಶೆಟ್ಟಿ ಅವರು ನಡೆಸುತ್ತಿದ್ದಾರೆ. ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ರತ್ನ ಕ್ಯಾಂಟೀನ್ ಮತ್ತು ನಗರಸಭಾ ಕಚೇರಿ ಬಳಿ ಇರುವ ನ್ಯೂ ರತ್ನಶ್ರೀ ಕ್ಯಾಂಟೀನ್ ಶುದ್ದ ಸಸ್ಯಹಾರಿ ಕ್ಯಾಂಟೀನ್ ಆಗಿದ್ದು, ಹೊಟೇಲ್ ನ್ಯೂ ರತ್ನಶ್ರೀ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರವನ್ನು ಗ್ರಾಹಕರಿಗೆ ಉಣಬಡಿಸುತ್ತಿದೆ.
ಅವರ ಗುಣ, ವ್ಯವಹಾರ ಮಾದರಿಗಳು ಅವರ ಉದ್ಯಮ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿ ಶುಭಹಾರೈಸಿದರು.

ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕಾಧ್ಯಕ ಸಹಜ್ ರೈ ಬಳದ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿನಲ್ಲಿ ವ್ಯಾಪಾರ ವ್ಯವಹಾರಗಳು ಕೂಡ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಇಂತಹ ಪುತ್ತೂರಿನಲ್ಲಿ 25 ವರ್ಷಗಳ ಹಿಂದೆ ಜಯಂತ್ ಅವರು ಕ್ಯಾಂಟೀನ್ ಹಾಗೂ ಕ್ಯಾಟರಿಂಗ್ ವ್ಯವಸ್ಥೆ ಪ್ರಾರಂಭಿಸಿದ್ದು, ಅದನ್ನು ಆಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿದ್ದಾರೆ. ಆ ಮೂಲಕ ಅಪಾರ ಗ್ರಾಹಕರನ್ನು ಸಂಪಾದಿಸಿದ್ದಾರೆ ಎಂದರು.

ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕಾಧ್ಯಕ ಸಹಜ್ ರೈ ಬಳದ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿನಲ್ಲಿ ವ್ಯಾಪಾರ ವ್ಯವಹಾರಗಳು ಕೂಡ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಇಂತಹ ಪುತ್ತೂರಿನಲ್ಲಿ 25 ವರ್ಷಗಳ ಹಿಂದೆ ಜಯಂತ್ ಅವರು ಕ್ಯಾಂಟೀನ್ ಹಾಗೂ ಕ್ಯಾಟರಿಂಗ್ ವ್ಯವಸ್ಥೆ ಪ್ರಾರಂಭಿಸಿದ್ದು, ಅದನ್ನು ಆಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿದ್ದಾರೆ. ಆ ಮೂಲಕ ಅಪಾರ ಗ್ರಾಹಕರನ್ನು ಸಂಪಾದಿಸಿದ್ದಾರೆ ಎಂದರು.

ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯ ಮಾತನಾಡಿ, ಜಯಂತ್ ಅವರ ಈ ಬೆಳವಣಿಗೆಗೆ ಅವರ ವ್ಯವಹಾರದ ರೀತಿ ಹಾಗೂ ಮನೆಯವರ ಒಳಗೊಳ್ಳುವಿಕೆಯೇ ಕಾರಣ ಎಂದು ಹೇಳಿ ಶುಭಹಾರೈಸಿದರು.

ಕ್ಯಾಟರರ್ಸ್ ಆಂಡ್ ಎರೇಂಜರ್ಸ್, ಎರಡು ಕ್ಯಾಂಟೀನ್‌ಗಳು ಹಾಗೂ ಒಂದು ಹೊಟೇಲ್ ಅನ್ನು ಜಯಂತ್ ಶೆಟ್ಟಿ ಅವರು ನಡೆಸುತ್ತಿದ್ದಾರೆ. ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ರತ್ನ ಕ್ಯಾಂಟೀನ್ ಮತ್ತು ನಗರಸಭಾ ಕಚೇರಿ ಬಳಿ ಇರುವ ನ್ಯೂ ರತ್ನಶ್ರೀ ಕ್ಯಾಂಟೀನ್ ಶುದ್ದ ಸಸ್ಯಹಾರಿ ಕ್ಯಾಂಟೀನ್ ಆಗಿದ್ದು, ಹೊಟೇಲ್ ನ್ಯೂ ರತ್ನಶ್ರೀ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರವನ್ನು ಗ್ರಾಹಕರಿಗೆ ಉಣಬಡಿಸುತ್ತಿದೆ.

ಪ್ರಮುಖರಾದ ಶಿವಕುಮಾರ್ ಪಿ. ಬಿ,ಕೃಷ್ಣ ಪ್ರಸಾದ್ ಆಳ್ವ, ಸುಂದರ ಪೂಜಾರಿ ಬಡಾವು,ಪ್ರಸನ್ನ ಕುಮಾರ್ ಶೆಟ್ಟಿ, ಸೀತಾರಾಮ ರೈ ಕೆದಂಬಾಡಿಗುತ್ತು, ಸಂತೋಷ್ ಕುಮಾರ್ ಕೈಕಾರ,ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ,ರವಿ ಪ್ರಾವಿಷನಲ್ ರ್ಸ್ಟೋನ ರವಿ, ಸತೀಶ್ ನ್ಯಾಕ್ ಪರ್ಲಡ್ಕ, ಶಾಲಿನಿ ರಮೇಶ್ ಆಳ್ವ, ಉಮೇಶ್ ರೈ ಮೊರಂಗಲ್ಲು ಗುತ್ತು, ವಿಶ್ವಲ್ ರೈ ತೊಟ್ಟ, ಪ್ರವೀಣ್ ರೈ ಸಾಂತ್ಯ, ಮಮತಾ ರೈ ತಡಗಜೆ, ವಿಶ್ವನಾಥ ರೈ ಪಡ್ಕೊಟ್ಟು ಚಂದ್ರಾವತಿ ರೈ, ಡಾ. ಪ್ರಥಮ್, ರವೀಂದ್ರ ಶೆಟ್ಟಿ, ಪ್ರಮೀಳಾ ಸೀತಾರಾಮ ಶೆಟ್ಟಿ, ಮುರಳಿಕೃಷ್ಣ ಹಸಂತಡ್ಕ, ಚನಿಲ ತಿಮ್ಮಪ್ಪ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಅನಿಲ್ ತೆಂಕಿಲ,ರಾಧಾಕೃಷ್ಣಬೋರ್ಕರ್, ಸಾಜ ರಾಧಾಕೃಷ್ಣ ಆಳ್ವ, ಡಾ.ಸುರೇಶ್ ಪುತ್ತೂರಾಯ, ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಅಭಿಜಿತ್, ಅಭಿಲಾಷ್, ಬೂಡಿಯಾರು ರಾಧಾಕೃಷ್ಣ ರೈ, ಶಶಿಕುಮಾರ್ ರೈ ಬಾಲ್ಗೊಟ್ಟು, ಹರ್ಷಕುಮಾರ್ ರೈ ಮಾಡಾವು, ಮೋಹನ್ ರೈ ನರಿಮೊಗರು, ಗೀತಾ ಮೋಹನ್ ರೈ, ನವೀನ್ ಭಂಡಾರಿ, ಶಿಶಿರ್ ಪೆರ್ವೋಡಿ, ಯುವರಾಜ್ ಪೆರಿಯತ್ತೋಡಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ರೈ, ಅಜಿತ್ ರೈ ಹೊಸಮನೆ, ಪ್ರಸನ್ನ ಕುಮಾರ್ ಮಾರ್ತ, ಉಜ್ವಲ್ ಪ್ರಭು, ಕಿರಣ್ ಕುಮಾರ್ ರೈ ಬಲ್ನಾಡು, ವಕೀಲ ಚಿದಾನಂದ ಬೈಲಾಡಿ, ಭಾಸ್ಕರ್ ರೈ ಮಾದೋಡಿ, ವಿಠಲ್ ರೈ ತ್ಯಾಗರಾಜ ರಸ್ತೆ, ಗಣೇಶ್ ಬಳ್ಳೇರಿ, ಹರೀಶ್ ರೈ ನಡುಬೈಲು, ಸುರೇಶ್ ರೈ ಗೆಣಸಿನಕುಮೇರು,ರಾಜೇಶ್ ಬನ್ನೂರು ಮತ್ತಿತರರು ಪಾಲ್ಗೊಂಡು ಶುಭಹಾರೈಸಿದರು.

ಮಾಲಕ ಜಯಂತ್ ಶೆಟ್ಟಿ ಅದರ ಪತ್ನಿ ಪ್ರಮೋದಿನಿ, ಪುತ್ರರಾದ ಪ್ರಜನ್ ಶೆಟ್ಟಿ, ಪವನ್ ಶೆಟ್ಟಿ ಮತ್ತು ಸೊಸೆ ಪೃಥ್ವಿ ಆಳ್ವ ಸಹಕರಿಸಿದರು.

Leave a Reply

Your email address will not be published. Required fields are marked *