ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಯುತ್ತಿದ್ದಾಗ ಈ ದುರ್ಘಟನೆ ಶನಿವಾರ ಬೆಳಗ್ಗೆಸಂಭವಿಸಿತು.

ನಾಯಿಗಳನ್ನು ಕಂಡು ಮುಳ್ಳುಹಂದಿ ಎಲ್ಲಿಂದಲೋ ಓಡಿಕೊಂಡು ಬಂದು ಕಾಲೇಜು ಆವರಣ ಪ್ರವೇಶಿಸಿತ್ತು. ಕೆಲವೇ ಹೊತ್ತಿನಲ್ಲಿ ಅದು ಕಾಲೇಜು ಕಟ್ಟಡದೊಳಗೆ ಪ್ರವೇಶಿಸಿ ಮೆಟ್ಟಿಲು ಹತ್ತುತ್ತ ೩ನೇ ಮಹಡಿ ತಲುಪಿತ್ತುö. ಮೆಟ್ಟಿಲ ಮೇಲೆ ಭಯದಿಂದ ಮುದುಡಿ ಕೂತಿದ್ದ ಮುಳ್ಳುಹಂದಿಯನ್ನು ಕಂಡು ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಇಲಾಖೆಯ ಸಿಬ್ಬಂದಿಗಳು, ಉಪ ವಲಯ ಅರಣ್ಯಾಕಾರಿ ಉಲ್ಲಾಸ್ ಅವರ ನೇತೃತ್ವದಲ್ಲಿ ಬಂದು ಮುಳ್ಳು ಹಂದಿಯನ್ನು ರಕ್ಷಿಸಲು ಯತ್ನಿಸಿದರು. ಭಯಗೊಂಡ ಮುಳ್ಳು ಹಂದಿ ಮೆಟ್ಟಿಲು ಹತ್ತುತ್ತಾ ಇನ್ನೊಂದು ಮಹಡಿಗೆ ಹೋಗಿದ್ದಲ್ಲದೆ, ಕಿಟಕಿಯೊಳಗೆ ತೂರಿ ಕೆಳಕ್ಕೆ ಜಿಗಿದಿದೆ. ನೆಲದ ಮೇಲೆ ಬಿದ್ದ ಹೊಡೆತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಲಯ ಅರಣ್ಯಾಧಿಕಾರಿ ಕಿರಣ್, ನಿಯಮ ಪ್ರಕಾರ ಪೋಸ್ಟ್ ಮಾರ್ಟಂ ಮಾಡಿ ಅಂತಿಮ ಸಂಸ್ಕಾರ ನಡೆಸಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *