ಪುತ್ತೂರು: ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಪೆರಿಯಡ್ಕ ಗ್ರಾಮದಲ್ಲಿ ಫೆ. 20 ರಂದು ನಡೆದಿದೆ.
ಉಪ್ಪಿನಂಗಡಿ ನಿವಾಸಿ ಅಬ್ದುಲ್ ಫಲ್ತಾಹ್ (50) ಗಾಯಗೊಂಡವರು.

ಇವರು ಉಪ್ಪಿನಂಗಡಿಯಿಂದ ಪೆರಿಯಡೆ ಕಡೆಗೆ ಸ್ಕೂಟರ್‌ (ಕೆಎ 21 6854) ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಸ್ಕೂಟರ್‌ (ಕೆಎ 70 ಹೆಚ್ 1262) ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಅಬ್ದುಲ್ ಫಲ್ತಾಹ್ ಅವರಿಗೆ ಬಿದ್ದು ಗಾಯವಾಗಿದ್ದು, ಅವರನ್ನು ತಕ್ಷಣ ಸ್ಥಳೀಯರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ಸಂಬಂಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *