ಕಡಬ: ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಪರಿವಾರ ದೈವಗಳ ನವೀಕರಣ ಕಾರ್ಯಕ್ರಮವು ಫೆಬ್ರವರಿ 21ರಂದು ವೈಭವದಿಂದ ನಡೆದಿದೆ.




ಫೆ.21ರಂದು ಬೆಳಗ್ಗೆ 5.30ಕ್ಕೆ ಮಹಾಗಣಪತಿ ಹೋಮ, ಪರಿವಾರ ಪೂಜೆ ನಡೆದಿದ್ದು, ಬೆಳಗ್ಗೆ 8.30ಕ್ಕೆ ಶ್ರೀ ಪನ್ನಕಿ ಸುಬ್ರಾಯ ಸ್ವಾಮಿ ದೇವರಿಗೆ ಬ್ರಹ್ಮಕಲಶಾಭಿಷೇಕ, ಕ್ಷೇತ್ರದ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಮಧ್ಯಾಹ್ನ 12 ಗಂಟೆಗೆ ಶ್ರೀದೇವರ ಮಹಾಪೂಜೆ, ಅಷ್ಟಬಂಧ ಕಾರ್ಯ, ಅನ್ನಸಂತರ್ಪಣೆ ನಡೆದಿದೆ.


ಸಂಜೆ 6.30ರಿಂದ ದೇವರ ಭಂಡಾರ ತಿರುಗು, ಉತ್ಸವ ಬಲಿ, ಮಹಾಪೂಜೆ, ಶ್ರೀ ದೇವರ ಬಲಿ ಹೋಮ ಹಾಗೂ ಉತ್ಸವಗಳು ನೆರವೇರಲಿವೆ. ರಾತ್ರಿ 12 ಗಂಟೆಯೊಳಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ, ಯಕ್ಷಗಾನ ಬಯಲಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ.
ಫೆ.15ರಿಂದ ಫೆ.20ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು, ಭಜನಾ ಕಾರ್ಯಕ್ರಮ, ಯಜ್ಞಾಗ್ನಿ ಬಯಲಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹರಿಕಥಾ ಸಪ್ತಾಹ ನಡೆದವು ಎಂದು ದೇವಸ್ಥಾನ ಸಮಿತಿ ಪ್ರಕಟಣೆಗೆ ತಿಳಿಸಿದೆ.



