ಬಂಟ್ವಾಳ :ಫೆ 25 : ಅವೈಜ್ಞಾನಿಕ, ಮತ್ತು ಅಸಮರ್ಪಕ ವಾಗಿ ಕಾರ್ಯಾಚರಣೆ ನಡೆಸುತ್ತಿರುರುವ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಟೋಲ್ ಗೇಟ್ ಅನ್ನು ಕೂಡಲೇ ತೆರವು ಗೊಳಿಸಬೇಕು, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಹೊಸತಾಗಿ ರಚನೆ ಆಗುತ್ತಿರುವಂತಹ ಟೋಲ್ ಗೇಟ್ ಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್, ಎಸ್ಡಿಪಿಐ ,ಜೆಡಿಎಸ್ ಪಕ್ಷಗಳ ಮುಖಂಡರು ಮತ್ತು ಹಲವು ಸಂಘಟನೆಗಳ ಮುಖಂಡರುಗಳು ಇಂದು ಬಿಸಿ ರೋಡಿನ ರಿಕ್ಷಾ ಭವನದಲ್ಲಿ ಸಭೆ ಸೇರಿ ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿಯನ್ನು ರಚಿಸಿದ್ದಾರೆ ಬ್ರಹ್ಮರಕೊಟ್ಲು ಟೋಲ್ ಪ್ಲಾಜಾ ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿದ್ದು ಇದು ಜಿಲ್ಲೆಯ ಜನತೆಗೆ ಮಾಡುವ ಮಹಾ ಮೋಸ ಮತ್ತು ಹಗಲು ದರೋಡೆ ಆಗಿದೆ.






ಇದರ ವಿರುದ್ಧ ಪಕ್ಷತೀತ ನೆಲೆಯಲ್ಲಿ ಸಂಘಟಿತವಾಗಿ ಸಕ್ರಿಯ ಹೋರಾಟಗಳನ್ನು ನಿರಂತರ ಮಾಡುವ ಮೂಲಕ ಬ್ರಹ್ಮರ ಕೋಟ್ಲು ಟೋಲ್ ಅನ್ನು ಶಾಶ್ವತವಾಗಿ ರದ್ದುಗೊಳಿಸಬೇಕು, ಅದಕ್ಕಾಗಿ ಇಂದು ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ ಯನ್ನು ರಚಿಸಲಾಗಿದೆ ಇದರ ಸಂಚಾಲಕರಾಗಿ ಸುಹೇಲ್ ಕಂದಕ್, ಅನ್ವರ್ ಸಾದತ್ ಬಜತ್ತೂರು ಹಾಗೂ ಎಂ ಎಸ್ ಮಹಮ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಹಾಗೂ ಸಮಿತಿ ಸದಸ್ಯರಾಗಿ ಹನೀಫ್ ಖಾನ್ ಕೊಡಾಜೆ, ಧನುರಾಜ್ ಪೂಜಾರಿ,ಅಶ್ರಫ್ ಕಲ್ಲೇಗ, ಲತೀಫ್ ಅರಫಾ,ಮೂನಿಶ್ ಅಲಿ, ಇಕ್ಬಾಲ್ ಐಎಮ್ಆರ್ ಶಾಹುಲ್ ಎಸ್ ಎಚ್, ಇಮ್ರಾನ್ ಪಿ ಜೆ, ನಾಸಿರ್, ವಿನಯ ಕುಮಾರ್, ಹಿಸ್ರರ್, ಸತ್ತಾರ್, ಸವಾಝ್ ಬಂಟ್ವಾಳ, ಶಾಕಿರ್ ಇವರನ್ನು ಸಭೆಯು ಆಯ್ಕೆ ಮಾಡಿದ್ದು ಮುಂದಿನ ಹೋರಾಟಗಳನ್ನು ಸಮರೋಪಾದಿಯಲ್ಲಿ ಮಾಡಲು ಸಭೆ ತೀರ್ಮಾನ ಕೈಗೊಂಡಿದ್ದು ಸಭೆಯ ಆರಂಭದಲ್ಲಿ ಐಎಂಆರ್ ಇಕ್ಬಾಲ್ ರವರು ಎಲ್ಲರನ್ನು ಸ್ವಾಗತಿಸಿದ್ದಾರೆ ಸವಾಲ್ ಬಂಟ್ವಾಳ ಧನ್ಯವಾದ ಅರ್ಪಿಸಿದ್ದಾರೆ.



