ಮಂಗಳೂರು: ರೈಲ್ವೇ ಟ್ರಾಕ್ ಬಳಿ ಕುಳಿತು ಮಾತನಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಮಂಗಳೂರಿನ ಬಾಬುಗುಡ್ಡೆಯಲ್ಲಿ ನಡೆಡಿದೆ.

14ವರ್ಷದ ಬಾಲಕ ಮತ್ತು ಆತನ ಸ್ನೇಹಿತೆ ಕುಳಿತು ಮಾತನಾಡುತ್ತಿದ್ದ ವೀಡಿಯೊ ಚಿತ್ರೀಕರಿಸಿ ಸಾಮಜಿಕ ತಾಣದಲ್ಲಿ ಹರಿಬಿಟ್ಟಿರುವ ಘಟನೆ ಫೆ.23 ರಂದು ನಡೆದಿದೆ. ಆರೋಪಿಗಳು ಅತನನ್ನು ಬೈದು ,ನಿಂದಿಸಿ ಕೈಯಿಂದ ಹಲ್ಲೆ ಮಾಡಿ ಕಳುಹಿಸಿದ್ದಾರೆ.
ಜಾತಿ ನಿಂದನೆಯ ಆರೋಪವು ಇಬ್ಬರು ಆರೋಪಿಗಳ ಮೇಲೆ ಕೇಳಿ ಬಂದಿದ್ದು ,ಈ ಬಗ್ಗೆ ಯುವಕನ ತಂದೆ ದೂರು ದಾಖಲಿಸಿರುತ್ತಾರೆ.
ಈ ಘಟನೆ ಸಂಬದಿತ ಮಂಗಳೂರು ದಕ್ಷಿಣ (ಪಾಂಡೇಶ್ವರ ) ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳ ವಿರುದ್ದ ಬಿಎನ್‌ಎಸ್ ಕಾಯ್ದೆಯ ವಿವಿಧ ಸೆಕ್ಷನ್ ಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *