ಮಂಗಳೂರು, ಫೆ.26: The Times of India ಆಯೋಜಿಸಿದ್ದ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಕ್ಲೇವ್ 2026 ಕಾರ್ಯಕ್ರಮವು ಮಂಗಳೂರಿನ Avatar Hotel ನಲ್ಲಿ ಭವ್ಯವಾಗಿ ನಡೆಯಿತು. ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಗಣ್ಯ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯಾದ್ಯಂತ ಪುಸ್ತಕ ಮಾರಾಟ ಮಳಿಗೆಯಲ್ಲಿ ಹೆಸರುವಾಸಿಯಾದ SLV Book House ಗೆ “ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್” ವಿಭಾಗದಲ್ಲಿ ಟೈಮ್ಸ್ ಬಿಸಿನೆಸ್ ಅವಾರ್ಡ್ ನೀಡಿ ಗೌರವಿಸಲಾಯಿತು. ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ Saina Nehwal ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪ್ರದಾನಿಸಿದರು.



ಎಸ್‌ಎಲ್‌ವಿ ಬುಕ್ ಹೌಸ್ ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದಿವಾಕರ್ ದಾಸ್ ನೇರ್ಲಾಜೆ ಹಾಗೂ ಪ್ರಧಾನ ವ್ಯವಸ್ಥಾಪಕರಾದ ರಾಜಾ ಅಂಚನ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಚಂದ್ರಕಾಂತ್ ಬೆಂಗಳೂರು, ರಾಮ್ ದಾಸ್ ಶೆಟ್ಟಿ (ವಿಟ್ಲ), ಯೋಗೀಶ್ ನೇರ್ಲಾಜೆ, ಅಮಿತ್ (ಮೈಸೂರು) ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ದಿವಾಕರ್ ದಾಸ್ ಅವರು, “ಗ್ರಾಹಕರಿಗೆ ನೀಡಿದ ಉತ್ತಮ ಸೇವೆಯ ಫಲವಾಗಿ ಈ ಪ್ರಶಸ್ತಿ ಲಭಿಸಿದೆ. ಆದ್ದರಿಂದ ಈ ಗೌರವವನ್ನು ನಮ್ಮ ಎಲ್ಲಾ ಗ್ರಾಹಕರಿಗೆ ಹಾಗೂ ಸಂಸ್ಥೆಯ ಪರಿಶ್ರಮಿ ಸಿಬ್ಬಂದಿಗೆ ಅರ್ಪಿಸುತ್ತೇನೆ,” ಎಂದು ಹೇಳಿದರು.
ಎಸ್‌ಎಲ್‌ವಿ ಬುಕ್ ಹೌಸ್ ಬೆಂಗಳೂರು, ಮೈಸೂರು, ಚಾಮರಾಜನಗರ, ಪುತ್ತೂರು, ಮೂಡಬಿದ್ರೆ ಹಾಗೂ ಮಂಗಳೂರಿನ ಬಿಜೈ, ಮೇರಿಹಿಲ್, ಮಾರ್ನೆಮಿಕಟ್ಟೆ, ಕೊಡಿಯಾಲ್ ಬೈಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ತನ್ನ ಶಾಖೆಗಳನ್ನು ನಡೆಸುತ್ತಿದೆ. ಇದೇ ವೇಳೆ ಕೊಡಗಿನ ಕುಶಾಲನಗರದಲ್ಲಿ ಹೊಸ ಶಾಖೆ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.





