ಕಡಬ: ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜೈನ್ ಲೇಔಟ್ ಹಳೇಸ್ಟೇಷನ್ ಪ್ರದೇಶದಲ್ಲಿ ಆಯೋಜಿಸಲಾದ ‘ಅಧೀರ ನೈಟ್ 2026’ ಕಾರ್ಯಕ್ರಮವು ಭರ್ಜರಿ ಯಶಸ್ಸು ಕಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮೀಣ ಭಾಗದ ಯುವ ಪ್ರತಿಭೆಗಳ ಶ್ರಮ, ಉತ್ಸಾಹ ಮತ್ತು ತಂಡಭಾವನೆ ಈ ಮಹೋತ್ಸವವನ್ನು ವಿಶೇಷವಾಗಿಸಿದೆ

ನಿರೀಕ್ಷೆಗೂ ಮೀರಿದ ಪ್ರದರ್ಶನಗಳೊಂದಿಗೆ ಯುವಕರು ವೇದಿಕೆಯನ್ನು ಕಂಗೊಳಿಸಿದರು. ಸಂಗೀತ, ನೃತ್ಯ, ಹಾಸ್ಯ ಹಾಗೂ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮನರಂಜಿಸಿತು. ವಿಶೇಷವಾಗಿ ಹಾಸ್ಯಮಯ ಅಂಕಣಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಹಳ್ಳಿಯ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ವೇದಿಕೆಯಾಗಿರುವ ‘ಅಧೀರ ನೈಟ್ 2026’ ಯುವಜನತೆಗೆ ಹೊಸ ಉತ್ಸಾಹ ನೀಡಿದೆ. ಗ್ರಾಮೀಣ ಮಟ್ಟದಲ್ಲೂ ಇಂತಹ ವೈಭವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಬಹುದೆಂಬ ವಿಶ್ವಾಸವನ್ನು ಇದು ಮೂಡಿಸಿದೆ.
ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಪ್ರೇಕ್ಷಕರು ಯುವಕರಿಗೆ ಹಾರೈಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಆಶಯ ವ್ಯಕ್ತಪಡಿಸಿದರು. ಒಟ್ಟಾರೆ ‘ಅಧೀರ ನೈಟ್ 2026’ ಕಡಬದಲ್ಲಿ ಹೊಸ ಸಂಸ್ಕೃತಿಕ ಅಧ್ಯಾಯವನ್ನು ಆರಂಭಿಸಿದ ಕಾರ್ಯಕ್ರಮವೆಂದು ಗುರುತಿಸಿಕೊಂಡಿದೆ.

Leave a Reply

Your email address will not be published. Required fields are marked *