ಕಡಬ ತಾಲೂಕಿನ ಕೊಯಿಲ ಕೆ.ಸಿ.ಫಾರ್ಮ್ನಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಏಳನೇ ಪಶುವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ತರಗತಿಗಳನ್ನು ಪ್ರಾರಂಭಿಸಲಾಗುವುದು, ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ಪಶುಸಂಗೋಪನಾ ಮತ್ತು ರೇಶ್ಮೆ ಇಲಾಖಾ ಸಚಿವ ಕೆ.ವೆಂಕಟೇಶ್ ಹೇಳಿದರು.

ಅವರು ಮಂಗಳವಾರ ಕೊಯಿಲ ಪಶುವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ, ಕಟ್ಟಡಗಳನ್ನು ಪರಿಶೀಲಿಸಿ , ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ, ಪತ್ರಕರ್ತರೊಂದಿಗೆ ಮಾತನಾಡಿದರು. ಇಲ್ಲಿ ಕಾಲೇಜು ಪ್ರಾರಂಭ ಮಾಡುವ ಪ್ರಕ್ರಿಯೇ ನಿಂತಿತ್ತು, ಈಗ ಅದಕ್ಕೆ ಚಾಲನೆ ನೀಡಲಾಗುವುದು. ಮುಖ್ಯವಾಗಿ ಪಶುವೈದ್ಯಕೀಯ ಕೌನ್ಸಿಲ್ ಆಫ್ ಇಂಡಿಯಾದ ಅನುಮೋದನೆ ದೊರೆಯಬೇಕು ಈ ನಿಟ್ಟಿನಲಿ ಪ್ರಯತ್ನ ಸಾಗಿದೆ, ಇಬ್ಬರು ಕೌನ್ಸಿಲ್ ಸದಸ್ಯರಿದ್ದಾರೆ ಈ ಬಾರಿ ಏನಾದರೂ ಮಾಡಿ ಅನುಮತಿ ಕೊಡಿಸಬೇಕು ಎಂದು ಕೇಳಿದ್ದೇವೆ. ಕೊÊಲ ಪಶುವೈದ್ಯಕೀಯ ಕಾಲೇಜಿನಲ್ಲಿ ಮೊದಲನೇ ಮತ್ತು ಎರಡನೇ ವರ್ಷದ ತರಗತಿ ಪ್ರಾರಂಭಿಸಲು ಯಾವುದೇ ಸಮಸ್ಯೆಗಳಿಲ್ಲ, ಏನೇನು ಕೊರತೆಗಳು ಇವೆಯೋ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ, ಕಾಲೇಜಿನ ಪ್ರಕ್ರಿಯೆ ಬಹಳ ಸಮಯದಿಂದ ನಿಂತಿದ್ದು ಈಗ ಎಲ್ಲವನ್ನೂ ಸರಿಪಡಿಸಲಾಗಿದೆ. ಕಾಲೇಜು ಪ್ರಾರಂಭ ಮಾಡಿದ ಬಳಿಕ ಮುಂದಿನ ದಿನಗಳಲ್ಲಿ ಏನೇನು ಆಗಬೇಕು ಅದನ್ನು ಸರಕಾರ ಹಂತಹ0ತವಾಗಿ ಮಾಡುತ್ತದೆ ಅದಕ್ಕೆ ಹಣ ಬಿಡುಗಡೆ ಮಾಡಲು ಸರಕಾರ ಒಪ್ಪಿಕೊಂಡಿದೆ. ವೈಸ್ಚಾನ್ಸಲರ್ ಅವರನ್ನು ಕರೆದುಕೊಂಡು ನಮ್ಮ ನಾಯಕರ ಬಳಿ ಹೋಗಿ ಅನುದಾನಕ್ಕೆ ಮನವಿ ಮಾಡಲಾಗಿದೆ.




ಮುಂದಿನ ಬಜೆಟ್ನಲ್ಲಿ ಹಣ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ . ೧೩೬ ಕೋಟಿ ರೂ ನ ಎಲ್ಲಾ ಕೆಲಸಗಳು ಆಗಿವೆ, ಇನ್ನು ಮೂಲಭೂತ ವ್ಯವಸ್ಥೆಗಳಿಗೆ ೨೩ ಕೋಟಿ ರೂ ಬೇಕು ಅದನ್ನೂ ಒದಗಿಸಲಾಗುವುದು, ಹೊಸತಾಗಿ ಕಾಲೇಜು ಪ್ರಾರಂಭ ಮಾಡುವಾಗ ಕೆಲವು ಸಮಸ್ಯೆಗಳು ಇರುತ್ತದೆ ಅದನ್ನೆಲ್ಲಾ ನಿಭಾಯಿಕೊಂಡು ಹೋಗಲಾಗುವುದು, ೨೫ ಬೋಧಕ ಹುದ್ದೆಗಳಿಗೆ ನೋಟಿಫಿಕೇಶನ್ ಮಾಡಲಾಗಿದೆ. ಆಪೈಕಿ ೧೩ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಿಕೊಳ್ಳಲಾಗಿದೆ. ಉಳಿದಂತೆ ೩೨ ಮಂದಿ ಸಿಬ್ಬಂದಿಗಳು ಅಗತ್ಯವಿದೆ. ಸಿಬ್ಬಂದಿಗಳನ್ನು ಬೇರೆ ಕಡೆಯಿಂದ ಇಲ್ಲಿಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಹಾಗೂ ಕೆಲವು ಸಿಬ್ಬಂದಿಗಳನ್ನು ಹೊರಗುತ್ತಿಗೆ ಮೇಲೆ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಕೊಯಿಲ ಫಾರ್ಮ್ನ್ನು ಕೂಡಾ ವೈದ್ಯಕೀಯ ಕಾಲೇಜು ಒಳಗಡೆ ತರಬೇಕೆನ್ನುವ ಉದ್ದೇಶ ಇಲ್ಲ. ಕಟ್ಟಡಗಳನ್ನು ಮತ್ತು ಇನ್ನಿತರ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುತ್ತದೆ. ಕಾಲೇಜು ಕಟ್ಟಡದ ಕಳಪೆ ಕಾಮಗಾರಿ ಬಗ್ಗೆ ನಿರ್ವಹಣೆ ಮಾಡಿರುವ ಹೌಸಿಂಗ್ ಬೋರ್ಡ್ನವರಲ್ಲಿ ಮಾತನಾಡುತ್ತೇನೆ ಎಂದು ಸಚಿವರು ಹೇಳಿದರು. ರಾಜ್ಯ ರಾಜಕರಣದ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು ನಾಯಕತ್ವ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಯಾವುದೇ ಬಣದಲ್ಲಿ ಗುರತಿಸಿಕೊಂಡಿಲ್ಲ ನನ್ನದೇನಿದ್ದರೂ ಕಾಂಗ್ರೆಸ್ ಬಣ, ಬಣಬಡಿದಾಟದಲ್ಲಿ ನಾನಿಲ್ಲ ಎಂದರು.


ಬಳಿಕ ಸಚಿವರು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಗತಿಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ರಾಮಕುಂಜದಲ್ಲಿರುವ ಗೋಶಾಲೆಗೆ ಭೆಟಿ ನೀಡಿ ವೀಕ್ಷಣೆ ಮಾಡಿದರು. ಶಾಸಕಿ ಭಾಗೀರಥಿ ಮುರುಳ್ಯ ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರ ಕಾಲೇಜು ಪ್ರಾರಂಭಿಸುವoತೆ ಸಚಿವರಲ್ಲಿ ವಿನಂತಿಸಿದರು.
ಕೊಯಿಲ ಪಶುವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಕುಮಾರ್ ಸಚಿವರಿಗೆ ಮಾಹಿತಿ ನೀಡಿದರು. ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖಾ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯಾ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖಾ ಆಯುಕ್ತೆ ಶಿಲ್ಪಾನಾಗ್ ಸಿ.ಟಿ., ಕರ್ನಾಟಕ ಪಶುವೈದ್ಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಸಿ.ವೀರಣ್ಣ , ಭಾರತೀಯ ಪಶುವೈದ್ಯಕೀಯ ಪರಿಷತ್ನ ಆಡಳಿತ ಮಂಡಳಿಯ ಸದಸ್ಯ ಡಾ. ಶುಶಾಂತ್ ರೈ ಬೆಳ್ಳಿಪ್ಪಾಡಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖಾ ಜಂಟಿ ನಿರ್ದೇಶಕ ಡಾ.ನಾಗರಾಜ್ , ಮಂಗಳೂರು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖಾ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಕೊಯಿಲ ಫಾರ್ಮ್ನ ಉಪನಿರ್ದೇಶಕ ಡಾ.ಚಿದಾನಂದ ಕೆ.ಬಿ., ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಪ್ರಸನ್ ಹೆಬ್ಬಾರ್ , ಡಾ.ಪುನೀತ್, ಕಡಬ ತಾಲೂಕು ಪಶುವೈದ್ಯಾಧಿಕಾರಿ ಡಾ.ಅಜಿತ್ ಎಂ.ಸಿ., ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ಪ ಜಿ.ರಾಮಕುಂಜ, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಅಭಿಲಾಷ್ ಪಿ.ಕೆ., ಆದಂ ಎಚ್. ಅಬ್ಬಾಸ್ ಕುಂತೂರು, ಯತೀಶ್ ಬಾನಡ್ಕ, ಅಶ್ರಫ್ ಶೇಡಿಗುಂಡಿ, ಕರುಣಾಕರ ಉರ್ಕ, ನಝೀರ್ ಪೂರಿಂಗ, ಎ.ಕೆ. ಬಶೀರ್, ಬಿಜೆಪಿ ಮುಖಂಡರದ ಲಕ್ಷ್ಮಿ ನಾರಾಯಣ ರಾವ್ ಆತೂರು, ಬಾಲಕೃಷ್ಣ ಗೌಡ ಬೇಂಗದಪಡ್ಪು, ಪ್ರಶಾಂತ್ ಆರ್.ಕೆ., ಶರತ್ ಕೆದಿಲ ಮತ್ತಿತರರು ಉಪಸ್ಥಿರಿದ್ದರು.


