ಪುತ್ತೂರು: ಕೆಮ್ಮಿಂಜೆ ಗ್ರಾಮದ ಗ್ರಾಮದೆವ ಶಿರಾಡಿ ರಾಜನ್ ದೈವಸಾನದಲ್ಲಿ ಮಾರ್ಚ್ 15, 2026ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದೇ ದೈವಸಾನದಲ್ಲಿ ನೆರವೇರಿತು.

ದೈವಸಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈವಸಾನದ ಟ್ರಸ್ಟಿನ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಹಗೋ ಪರಿವಾರದ ವರ್ಗದವರು, ಗೌರವಾಧ್ಯಕ್ಷರಾದ ಎನ್. ರವೀಂದ್ರ ಶೆಟ್ಟಿ, ಅಧ್ಯಕ್ಷರಾದ ಪಿ. ಶ್ರೀಧರ ಹೆಗ್ಗಡೆ, ಕಾರ್ಯದರ್ಶಿ ಡಾ. ದಿನೇಶ್ ಸಿ. ಎಚ್., ಡಾ. ರಮೇಶ್ ಕೆ, ಸಂಚಾಲಕರಾದ ದಯಾನಂದ ಎಂ, ಉಪಾಧ್ಯಕ್ಷರಾದ ವಿಶ್ವನಾಥ ನಾಯ್ಕ್ ಕೆ. ಲೋಕನಾಥ್, ಎ. ತಿಮ್ಮಪ್ಪ ಲೋಕೇಶ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕೆಮ್ಮಂಜೆ, ಸಹ ಕಾರ್ಯದರ್ಶಿ ಚಂದ್ರಶೇಖರ್, ಸಹ ಖಜಾಂಚಿ ಸುರೇಶ್, ಪ್ರಮೀಳಾ, ವೀಣಾ ಜಿ ರಾವ್ ಸೇರಿದಂತೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ, ಸುಬ್ರಹ್ಮಣ್ಯ ಭಟ್ಟರು, ದೈವದ ಪೂಜಾರಿ ಪ್ರೊಪ್ಪ ದೇವಾಡಿಗ ಹಾಗೂ ದೈವಪತಿ ಯೋಗೀಶ್ ದೇವಾಡಿಗ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ವಿವರಗಳನ್ನು ಹಂಚಿಕೊಂಡು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸಲಾಯಿತು.

Leave a Reply

Your email address will not be published. Required fields are marked *