ಕುಕ್ಕೆ ಸುಬ್ರಹ್ಮಣ್ಯ: ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ವರ್ಷಪೂರ್ತಿ ಕಾತರದಿಂದ ಕಾಯುವ ಪವಿತ್ರ ಮಹಾಪ್ರಸಾದ ‘ಮೂಲಮೃತ್ತಿಕಾ’ (ಹುತ್ತದ ಮಣ್ಣು) ನ್ನು ಇಂದು ಮುಂಜಾನೆ ಶುಭಮಹೂರ್ತದಲ್ಲಿ ತೆಗೆಯಲಾಯಿತು.

ಶ್ರೀಕ್ಷೇತ್ರದ ಗರ್ಭಗುಡಿಯ ಮೂಲಸ್ಥಾನದಿಂದ ದೇವಳದ ಪ್ರಧಾನ ಅರ್ಚಕರು ವೈದಿಕ ವಿಧಿವಿಧಾನಗಳೊಂದಿಗೆ ಈ ಮೂಲಪ್ರಸಾದವನ್ನು ಸಂಪ್ರದಾಯಬದ್ಧವಾಗಿ ತೆಗೆಯುವ ಕಾರ್ಯ ನೆರವೇರಿಸಿದರು. ಬಳಿಕ, ಈ ಪವಿತ್ರ ಮೃತ್ತಿಕೆಯನ್ನು ಭಕ್ತಾದಿಗಳಿಗೆ ವಿತರಿಸಲಾಯಿತು.


ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಾತ್ರ ವಿಶಿಷ್ಟವಾದ ಈ ಮೂಲಮೃತ್ತಿಕಾ ಪ್ರಸಾದವನ್ನು ದೇಶದ ಯಾವುದಾದರೂ ಬೇರೆ ದೇವಸ್ಥಾನದಲ್ಲಿ ಪಡೆಯಲು ಸಾಧ್ಯವಿಲ್ಲ ಎಂಬುದು ವಿಶೇಷ. ವರ್ಷದಲ್ಲಿ ಒಂದೇ ಬಾರಿ ಲಭ್ಯವಾಗುವ ಈ ಪ್ರಸಾದವನ್ನು ಪಡೆಯಲು ಅನೇಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.



