ಕಡಬ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ.) ಪುತ್ತೂರು ಇದರ ಕಾರ್ಯದರ್ಶಿ ಬಿ.ಟಿ. ಮಹೇಶ್‌ಚಂದ್ರ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸತೀಶ್ ಕೆ. ಐತ್ತೂರು ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಅಜಿತ್ ಪಾಲೇರಿ, ರವಿ ಮಾಯಿಲ್ಗ ಹಾಗೂ ಗೀತಾ ಉಂಡಿಲ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮಿಥುನ್ ಸುಂದರ್ ಪಲ್ಲತ್ತಡ್ಕ, ಜೊತೆ ಕಾರ್ಯದರ್ಶಿಗಳಾಗಿ ಲಕ್ಷ್ಮೀಶ್ ಬಂಗೇರ ಪೆಲತ್ತೊಡಿ, ಅಶ್ವಥ್ ಸಾಂತ್ಯ ಮತ್ತು ಕೃಷ್ಣಪ್ಪ ಅಮೈ ಅವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ಮರಕ್ಕಡ ನೇಮಕಗೊಂಡರು.
ಸಮಿತಿ ಸದಸ್ಯರಾಗಿ ದಿನೇಶ್ ಕೇಪುಲು, ಉಮೇಶ್ ಪೂಜಾರಿ ಬಳ್ಪ, ವಸಂತ ಪೂಜಾರಿ ಬದಿಬಾಗಿಲು, ಅಭಿಲಾಷ್ ಪಿ.ಕೆ ಕಲ್ಲುಗುಡ್ಡೆ, ಸಂತೋಷ್ ಗುಂಡ್ಯ, ಉಮೇಶ್ ಕಾರ್ಲಾಡಿ, ಬಾಲಕೃಷ್ಣ ಬಣಜಾಲು, ಡಾ. ರವಿ ಕಕ್ಕೇಪದವು ಹಾಗೂ ಬಾಲಕೃಷ್ಣ ನೂಜಾಡಿ ಅವರನ್ನು ಆಯ್ಕೆ ಮಾಡಲಾಯಿತು.





ಗೌರವ ಸಲಹೆಗಾರರಾಗಿ ಜಿನ್ನಪ್ಪ ಸಾಲ್ಯಾನ್ (ಕಡಬ), ವಿಜಯಕುಮಾರ್ ಸೊರಕೆ ನೇಮಕಗೊಂಡರು. ಸಲಹೆಗಾರರಾಗಿ ನಾರಾಯಣ ಪೂಜಾರಿ ಪಾಲಪ್ಪೆ, ಆನಂದ ಟೈಲರ್, ಉಷಾ ಅಂಚನ್, ಅಶೋಕ್ ಕೊಯಿಲ, ಲಿಂಗಪ್ಪ ಪೂಜಾರಿ ಕೇಪುಲು, ಶಶಿಧರನ್ ಕಟ್ಟತ್ತಡ್ಕ, ಕುಮಾರಿ ವಾಸುದೇವನ್, ಸಂತೋಷ್ ಮಾತ್ರಾಡಿ ಹಾಗೂ ಡಾ. ಸದಾನಂದ ಕುಂದರ್ ನೆಲ್ಯಾಡಿ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.



