ನೆಲ್ಯೊಟ್ಟು: ಕೊಯಿಲ ಗ್ರಾಮದ ಗೋಳಿತ್ತಡಿ–ನೆಲ್ಯೊಟ್ಟು ಪ್ರದೇಶದಲ್ಲಿ ಸಾರ್ವಜನಿಕವಾಗಿ ಸೇವೆ ಸ್ವೀಕರಿಸುತ್ತಿರುವ Rakteshwari–Guliga Daiva Shrine ದೈವಗಳಿಗೆ ವಾರ್ಷಿಕ ತಂಬಿಲ ಸೇವೆ ಮಂಗಳವಾರ ಭಕ್ತಿಭಾವದಿಂದ ನೆರವೇರಿತು.




ಬೆಳಿಗ್ಗೆ ತಂಬಿಲ ಸೇವೆ ನಡೆದಿದ್ದು, ಬಳಿಕ ಮಧ್ಯಾಹ್ನ ಹರಕೆ ರೂಪದ ಅಗೇಲು ಸೇವೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು. ತಂಬಿಲ ಸೇವೆಯನ್ನು ಕೃಷ್ಣಪ್ಪ ಪೂಜಾರಿ ನಡುಕೂಟೇಲು ನೆರವೇರಿಸಿದರು.


