ಕಡಬ, ಮಾ. 10: ಧಾರ್ಮಿಕ ಕ್ಷæೕತ್ರದ ಸೇವೆಗಾಗಿ ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ಮೊಕ್ತೇಸರ ಕಲ್ಪುರೆ ನಾರಾಯಣ ಭಟ್‌ ಅವರಿಗೆ ‘ಧರ್ಮ ಸಾರಥಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ದೇವಸ್ಥಾನದ ನವೀಕರಣ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ಆಶೀರ್ವದಿಸಿದ ಸುಬ್ರಹ್ಮಣ್ಯದ ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನಂ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕಲ್ಪುರೆ ನಾರಾಯಣ ಭಟ್‌ ಅವರು 800 ವರ್ಷಗಳ ಇತಿಹಾಸವುಳ್ಳ ಬೊಳ್ಳೂರು ದೇವಸ್ಥಾನದ ಪುನರುತ್ಥಾನಕ್ಕಾಗಿ ಮುತುವರ್ಜಿ ವಹಿಸಿ ಸಲ್ಲಿಸಿದ ಸೇವೆ ಅನನ್ಯವಾದುದು. 25 ವರ್ಷಗಳ ಹಿಂದೆ ಪೂಜಾ ಕೈಂಕರ್ಯಗಳಿಲ್ಲದೆ ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿ 2 ಬಾರಿ ಬ್ರಹ್ಮಕಲಶೋತ್ಸವವನ್ನು ಊರವರ ನೆರವಿನೊಂದಿಗೆ ಶಾಸ್ತ್ರಬದ್ಧವಾಗಿ ನೆರವೇರಿಸಿರುವುದು ಉಲ್ಲೇಖನೀಯವಾಗಿದೆ

ಸ್ತುತ ಅವರ ಪುತ್ರ ರಮೇಶ್‌ ಕಲ್ಪುರೆ ಅವರ ಅಧ್ಯಕ್ಷತೆಯಲ್ಲಿ ಮನೆಯವರು ಹಾಗೂ ಊರವರ ಸಹಕಾರದೊಂದಿಗೆ ದೇವಸ್ಥಾನದ ನವೀಕರಣ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಅದ್ದೂರಿಯಿಂದ ನೇರವೇರಿಸಿರುವುದು ಗ್ರಾಮಕ್ಕೆ ಸುಭಿಕ್ಷæಯನ್ನು ತರುವ ಕಾರ್ಯವಾಗಿದೆ. ಕಲ್ಪುರೆ ನಾರಾಯಣ ಭಟ್‌ ಅವರು ಧಾರ್ಮಿಕ ಕ್ಷæೕತ್ರಕ್ಕೆ ಸಲ್ಲಿಸಿದ ಸೇವೆಯು ಅನುಕರಣೀಯ ಎಂದು ಶ್ಲಾಘಿಸಿದರು. ಕಲ್ಪುರೆ ನಾರಾಯಣ ಭಟ್‌ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣದಿಂದಾಗಿ ಅವರ ಪತ್ನಿ ಜಯಲಕ್ಷ್ಮಿ ನಾರಾಯಣ ಭಟ್‌, ಪುತ್ರ ರಮೇಶ್‌ ಕಲ್ಪುರೆ, ಪುತ್ರಿ ಡಾ| ವೀಣಾ ರಾಜಾರಾಮ ಆಚಾರ್ಯ, ಸೊಸೆ ರಾಧಿಕಾ ರಮೇಶ್‌ ಅವರು ಪುರಸ್ಕಾರವನ್ನು ಸ್ವೀಕರಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷ ವಿಜಯಕುಮಾರ್‌ ರೈ ಕರ್ಮಾಯಿ ಸಮ್ಮಾನ ಪತ್ರ ವಾಚಿಸಿದರು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ, ಸುರತ್ಕಲ್‌ ಗೋವಿಂದ ದಾಸ್‌ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಶೆಟ್ಟಿ, ಶ್ರೀ ಕ್ಷæೕತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಬಾಬು ನಾಯ್ಕ ಎ., ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಜನಾರ್ದನ ಗೌಡ ಪುತ್ತಿಲ, ಮೇದಪ್ಪ ಗೌಡ ಡೆಪ್ಪುಣಿ, ಕೋಶಾಧಿಕಾರಿ ಅಮರನಾಥ ಶೆಟ್ಟಿಕುಂಜತ್ತೋಡಿ, ಕಾರ್ಯದರ್ಶಿ ಶರತ್‌ ಪಂಜೋಡಿ, ಪ್ರಮುಖರಾದ ವೆಂಕಟ್ರಮಣ ಗೌಡ ಪಾಂಗ, ಸಾಂತಪ್ಪ ಗೌಡ ಕೋಲಂತ್ತಾಡಿ, ರಾಮಚಂದ್ರ ರೈ ಹೊಸಮಜಲು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *