ಕಡಬ: ಕಡಬ ತಾಲೂಕಿನ ಅಲಂಕಾರು ಗ್ರಾಮದ ನಗ್ರಿ ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ತೋಟದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ (ಮಾ.11) ಬೆಳಕಿಗೆ ಬಂದಿದೆ.





ಅಲಂಕಾರು ಗ್ರಾಮದ ನಗ್ರಿ ನಿವಾಸಿ ಸತೀಶ್ ಅವರು ಮೃತಪಟ್ಟ ವ್ಯಕ್ತಿ.
ಮಾಹಿತಿಯ ಪ್ರಕಾರ, ಮಾರ್ಚ್ 11ರಂದು ಬೆಳಗ್ಗೆ ಸುಮಾರು 7 ಗಂಟೆಯ ವೇಳೆಗೆ ಸತೀಶ್ ಅವರು ತಮ್ಮ ತೋಟಕ್ಕೆ ತೆರಳಿದ್ದರು. ಆದರೆ ಬೆಳಗ್ಗೆ 7.45 ಗಂಟೆಯಾದರೂ ಮನೆಗೆ ಮರಳದಿದ್ದರಿಂದ ಆತಂಕಗೊಂಡ ಅವರ ಪತ್ನಿ ಹಾಗೂ ಮೊಮ್ಮಕ್ಕಳಾದ ರಚನಾ ಮತ್ತು ರಾಕೇಶ್ ಅವರು ತೋಟಕ್ಕೆ ಹುಡುಕಿಕೊಂಡು ಹೋಗಿದ್ದಾರೆ.


ಈ ವೇಳೆ ತೋಟದಲ್ಲಿದ್ದ ಕಾಡುಮರದ ಕೊಂಬೆಗೆ ತಮ್ಮ ಲುಂಗಿಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸತೀಶ್ ಅವರು ಮೃತಪಟ್ಟಿರುವುದು ಪತ್ತೆಯಾಗಿದೆ.
ಈ ಕುರಿತು ಮೃತರ ಪುತ್ರಿ ಕಾಂಚನ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 08/2026, ಕಲಂ 194 (BNSS-2023) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


