ಕಡಬ : ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕಡಬ ಪಟ್ಟಣ ಪಂಚಾಯಿತಿಯಲ್ಲಿ “ನಾರಿ ಅಭಿಯಾನ” ಕಾರ್ಯಕ್ರಮವನ್ನು 13.03.2026 ನೇ ಶುಕ್ರವಾರದಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ತಮನ್ನಾ ಜಬಿನ್, ಮುಖ್ಯ ಅಧಿಕಾರಿ ಶ್ರೀಮತಿ ಲೀಲಾವತಿ ಸೇರಿದಂತೆ ಸಮಿತಿ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದರು.


ಈ ಸಂದರ್ಭದಲ್ಲಿ ಪೌರಕಾರ್ಮಿಕರ ವಿಶ್ರಾಂತಿ ಗೃಹದ ಮುಂಭಾಗದಲ್ಲಿ ಕಮ್ಯುನಿಟಿ ಮೊಬಿಲೈಸರ್ಗಳು ಮತ್ತು ಪೌರಕಾರ್ಮಿಕರ ಸಹಕಾರದಿಂದ “ಕಸದಿಂದ ರಸ” ಎಂಬ ಪರಿಕಲ್ಪನೆಯಡಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಅಲಂಕರಿಸಿ ಗಿಡಗಳ ಸುತ್ತ ಅಲಂಕಾರಿಕ ಕಾಂಪೌಂಡ್ ಆಗಿ ರೂಪಿಸಿ ಬಳಸಲಾಯಿತು. ಈ ವಿನೂತನ ಪ್ರಯತ್ನವು ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರ ಸಬಲೀಕರಣ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಸಹ ಸಂದೇಶ ನೀಡಲಾಯಿತು.









