ಕಡಬ,ಮಾ,14; ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ)ಯ ಪ್ರಮುಖ ಕಾರ್ಯಕ್ರಮವಾದ ಇನ್‌ಸ್ಪೈರ್ ಅವಾರ್ಡ್ ಮನಾಕ್ ಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಯಶಸ್ ಬಿ. ಕೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸ್ಮಾರ್ಟ್ ಟ್ರೈನ್ ಎಂಬ ಶೀರ್ಷಿಕೆ ಯ ಯೋಜನೆಯಡಿಯಲ್ಲಿ ಈ ಆಯ್ಕೆ ನಡೆದಿದೆ. ಇವರಿಗೆ ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್ ಅವರ ಮಾರ್ಗದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಉಷಾ ಕುಮಾರಿ ತರಬೇತಿ ನೀಡಿರುತ್ತಾರೆ.. ಯಶಸ್ ಬಿ.ಕೆ. ಇವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಘಟಕದ ಅಧ್ಯಕ್ಷ , ಪರ್ತಕರ್ತ ಕೆ.ಎಸ್. ಬಾಲಕೃಷ್ಣ ಕೊಯಿಲ ಹಾಗೂ ಮೀನಾಕ್ಷಿ ಬಿ. ಕೆ. ದಂಪತಿಯ ಪುತ್ರ ರಾಗಿರುತ್ತಾರೆ.

Leave a Reply

Your email address will not be published. Required fields are marked *