ಕಡಬ, ಮಾ.15: ಐರ್ಲೆಂಡ್‌ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಕುಟ್ರುಪಾಡಿ ನಿವಾಸಿ ಸಾಂಜೋ ಸುನಿಲ್ ಅವರ ಸಾವಿನ ಕುರಿತಾಗಿ ಸಮಗ್ರ, ತನಿಖೆ ನಡೆಸಬೇಕೆಂದು ಆಗ್ರಹಿಸಿ ಭಾನುವಾರ ಕಡಬದಲ್ಲಿ ಸಾವಿರಾರು ಜನರು ಮೌನ ಕ್ಯಾಂಡಲ್ ಮೆರವಣಿಗೆ ನಡೆಸಿದರು.




ಕಡಬ ಕ್ರಿಶ್ಚಿಯನ್ ಲೈಟಿಂಗ್ ಕ್ಲಬ್ ಮತ್ತು ಮಲಯಾಳಿ ಫ್ರೆಂಡ್ಸ್ ಸಂಘಟನೆಗಳ ನೇತೃತ್ವದಲ್ಲಿ ಅನುಗ್ರಹ ಸಭಾಭವನದಿಂದ ಸ್ಟಂಟ್ ಜೋಸೆಫ್ ವಾಝ್ ವಾಣಿಜ್ಯ ಕಟ್ಟಡದವರೆಗೆ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಸಾಂಜೋ ಅವರ ಸಾವಿನ ಸತ್ಯಾಸತ್ಯತೆ ಬಹಿರಂಗವಾಗಬೇಕೆಂದು ಒತ್ತಾಯಿಸಿದರು.


ಸಾಂಜೋ ಸುನಿಲ್ ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿ ಲಿಷ್ಮ ಫಿಲಂ ಅವರ ಡಿಪೆಂಡೆಂಟ್ ವಿಸದ ಮೂಲಕ ಐರ್ಲೆಂಡ್‌ಗೆ ತೆರಳಿದ್ದು, ಅಲ್ಲಿ ಕೇವಲ 28 ದಿನಗಳಲ್ಲಿ ಅವರ ಮೃತದೇಹ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ.
ಸ್ಥಳೀಯ ಮುಖಂಡರ ಪ್ರಕಾರ ಸಂಶೋಧನೆ ತನಿಖೆ ನಡೆಸಿ ಸಾವಿನ ಸತ್ಯಾಂಶವನ್ನು ಹೊರತರುವಂತೆ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಸಾಂಜೋ ಸುನಿಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.


