ಪುತ್ತೂರು: ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್ ರವರು ಚರ್ಚ್ ನ ದೈನಂದಿನ ವ್ಯವಹಾರ ಹಾಗೂ ಆಡಳಿತದಲ್ಲಿ ನಡೆಸುವ ಕಾನೂನುಬಾಹಿರ ಚಟುವಟಿಕೆಗಳನ್ನು, ಸರ್ವಾಧಿಕಾರವನ್ನು ಚರ್ಚಿನಲ್ಲಿ ಪ್ರಶ್ನಿಸಿದ ಬಗ್ಗೆ ಹಾಗೂ ಚರ್ಚಿನ ಸದಸ್ಯರ ಬಗ್ಗೆ ಜನಜಾಗೃತಿ(ಪತ್ರಿಕಾಗೋಷ್ಠಿ) ಮೂಡಿಸಲು ಪ್ರಯತ್ನಿಸಿದಾಗ ಅದನ್ನು ತಡೆಯಲು ತನ್ನ ಅಧಿಕಾರ ದುರುಪಯೋಗ ಮಾಡಿ ಚರ್ಚಿನ ಮಾಜಿ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿರುವ ಮೌರಿಸ್ ಮಸ್ಕರೇನ್ಹಸ್ ವಿರುದ್ಧ ಹಾಗೂ ಇತರ ಸಂಗಾತಿಗಳ ವಿರುದ್ಧ ಸುಳ್ಳು ಪ್ರಚಾರ ಹಬ್ಬಿಸಿ ಮಾನಹಾನಿ ಮಾಡಲು ಸಮಾಜದಿಂದ ದೂರವಿಡಲು ಪ್ರಯತ್ನಿಸುವ ಸಲುವಾಗಿ 2025, ಎಪ್ರಿಲ್ 22 ರಂದು ಪುತ್ತೂರು ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾ ಭವನಕ್ಕೆ ಪತ್ರಕರ್ತರನ್ನು ಕರೆದು ಕೆಲವು ಸ್ಥಾಪಿತ ಹಿತಾಸಕ್ತಿಗಳ ಸಹಾಯದಿಂದ ಮಾನಹಾನಿ ಮಾಡುವ ಉದ್ಧೇಶದಿಂದ ಪತ್ರಿಕಾಗೋಷ್ಠಿ ನಡೆಸುವ ವ್ಯವಸ್ಥೆ ಮಾಡಿರುತ್ತಾರೆ.

ಪತ್ರಿಕಾಗೋಷ್ಠಿ ವಿಚಾರವು ಪತ್ರಿಕೆಯಲ್ಲಿ ಪ್ರಕಟವಾದಾಗ ಅದರ ಪ್ರತಿಗಳನ್ನು ಪೂಜೆಗೆ ಬಂದ ಭಕ್ತಾದಿಗಳಿಗೆ ತನ್ನ ಹಿಂಬಾಲಕರಿಂದ ಚರ್ಚ್ ವಠಾರದಲ್ಲಿ ಹಂಚಿಸಿರುವುದು. ಇದರಿಂದ ಮಾನಹಾನಿಗೊಳಪಟ್ಟ ಫಿರ್ಯಾದಿದಾರ ಮೌರಿಸ್ ಮಸ್ಕರೇನ್ಹಸ್ ರವರು ಮೇಲ್ಕಾಣಿಸಿದ ಲಾರೆನ್ಸ್ ಮಸ್ಕರೇನ್ಹಸ್, ಜೆರಾಲ್ಡ್ ಆಸ್ಟಿನ್ ಡಿಕೋಸ್ಟ, ಜೋಸೆಫ್ ಡಿ’ಸೋಜ, ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್, ಕ್ಲೆಮೆಂಟ್ ಪಿಂಟೊ, ಶ್ರೀಮತಿ ಎವ್ಲಿನ್ ಡಿ’ಸೋಜ ಇವರ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪೊಲೀಸರಲ್ಲಿ ಅಶ್ಲೀಲ ಪದಗಳನ್ನು ಸೇರಿಸಿ ಪೊಲೀಸರಲ್ಲಿ ಹೇಳಿಕೆ ನೀಡಿರುತ್ತಾರೆ. ಈ ಬಗ್ಗೆ ಮೌರಿಸ್ ಮಸ್ಕರೇನ್ಹಸ್ ರವರು ಪುತ್ತೂರು ಪ್ರಧಾನ ಹಿರಿಯ ಸಿವಿಲ್ ಮುಕ್ತ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿರುತ್ತಾರೆ. ಈ ಬಗ್ಗೆ ಮಾನ್ಯ ನ್ಯಾಯಾಲಯ ಆರೋಪಿತರಿಗೆ ತುರ್ತು ನೋಟೀಸ್ ಜಾರಿಗೊಳಿಸಿರುತ್ತಾರೆ. ಮೌರಿಸ್ ಮಸ್ಕರೇನ್ಹಸ್ ರವರ ಪರ ಹಿರಿಯ ನ್ಯಾಯವಾದಿ ಪಿ.ಕೆ ಸತೀಶನ್ ವಾದಿಸಿದ್ದರು.









