ಪುತ್ತೂರು : ಮಕ್ಕಳ ಮೊದಲ ಹೆಜ್ಜೆ ಆತ್ಮವಿಶ್ವಾಸದಿಂದ ಆರಂಭವಾಗಬೇಕು ಎಂಬ ಉದ್ದೇಶದೊಂದಿಗೆ ಭಾರತದ ಪ್ರಮುಖ ಆರಂಭಿಕ ಶಿಕ್ಷಣ ಸಂಸ್ಥೆಯಾದ EuroKids ದರ್ಬೆಯ ವಿಶಾಲ್ ಮಾರ್ಟ್ ಎದುರು ಹೊಸ ಪ್ರಿಸ್ಕೂಲ್ ಅನ್ನು ಪ್ರಾರಂಭಿಸುತ್ತಿದ್ದು, ಇದರ ಉದ್ಘಾಟನೆ ಮಾರ್ಚ್ 21ರಂದು ನಡೆಯಲಿದೆ ಎಂದು ಸಂಸ್ಥೆಯ ಟ್ರಸ್ಟಿಗಳಾದ ಮಂಜು ಗೋಪಿನಾಥ್ ಮತ್ತು ಜಯರಾಮ್ ಕಕ್ಕಾಜೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಯೂರೋಕಿಡ್ಸ್ ಕೇವಲ ಶಿಕ್ಷಣ ಸಂಸ್ಥೆಯಲ್ಲ, ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿರುವ ವಿಶ್ವಾಸದ ಹೆಸರು ಎಂದರು. 3 ದೇಶಗಳಲ್ಲಿ 500ಕ್ಕೂ ಹೆಚ್ಚು ನಗರಗಳಲ್ಲಿ 1,700 ಕ್ಕೂ ಅಧಿಕ ಕೇಂದ್ರಗಳ ಮೂಲಕ 7 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ ಎಂದು ತಿಳಿಸಿದರು.
ಇಲ್ಲಿ ಮಕ್ಕಳಿಗೆ ಒತ್ತಡವಿಲ್ಲದ ಶಿಕ್ಷಣ ನೀಡಲಾಗುತ್ತಿದ್ದು, ಪ್ರೀತಿ, ಅನ್ವೇಷಣೆ ಮತ್ತು ಅನುಭವಾಧಾರಿತ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ. ಸುರಕ್ಷಿತ ತರಗತಿಗಳು, ತರಬೇತಿ ಪಡೆದ ಶಿಕ್ಷಕರು ಹಾಗೂ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಅಳವಡಿಸಲಾಗುತ್ತದೆ ಎಂದರು.

ಸಂಸ್ಥೆಯ ಹಿತೈಷಿ ಡಾ. ರಂಜಿತಾ ಮಾತನಾಡಿ, ಮಾ.21ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ Ashok Kumar Rai ಉದ್ಘಾಟಿಸಲಿದ್ದಾರೆ. ಕೃಷಿಕ ಸುಧಾಮ ಕಕ್ಕಾಜೆ ದೀಪ ಪ್ರಜ್ವಲಿಸಲಿದ್ದು, Sri Ramakrishna High School ಸಂಚಾಲಕ ಹೇಮನಾಥ ಶೆಟ್ಟಿ ಕಾವು ತರಗತಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ ಎಂದರು.
ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗಿಸ್, ನ್ಯಾಯವಾದಿ ಮಹೇಶ್ ಕಜೆ, ಶಿಕ್ಷಣಪ್ರೇಮಿ ಪಾರೂಕ್ ಬಾಯಬ್ಬೆ ಹಾಗೂ ಕಟ್ಟಡ ಮಾಲಕ ಮಂಜುನಾಥ್ ನಾಯಕ್ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

2 ರಿಂದ 6 ವರ್ಷದ ಮಕ್ಕಳ ಬೌದ್ಧಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಸಮಾನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಪ್ಲೇ ಗ್ರೂಪ್, ನರ್ಸರಿ, ಯೂರೋ ಜ್ಯೂನಿಯರ್ ಮತ್ತು ಯೂರೋ ಸೀನಿಯರ್ ಎಂಬ ನಾಲ್ಕು ವಿಭಾಗಗಳಲ್ಲಿ ತರಗತಿಗಳು ನಡೆಯಲಿವೆ. ದಿನಕ್ಕೆ 3 ಗಂಟೆಗಳ ತರಗತಿಗಳು ನಡೆಯಲಿದ್ದು, ಪೋಷಕರ ಅಗತ್ಯಕ್ಕೆ ಅನುಗುಣವಾಗಿ ಮಧ್ಯಾಹ್ನದ ಬಳಿಕ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆಯೂ ಇರಲಿದೆ.
ಏಪ್ರಿಲ್ 15ರಿಂದ ಪೋಷಕರಿಗೆ ಸಂಸ್ಥೆಯನ್ನು ವೀಕ್ಷಿಸಲು ಅವಕಾಶವಿದ್ದು, ಮನೆಯ ವಾತಾವರಣದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಇರಲಿದೆ ಎಂದು ಡಾ. ರಂಜಿತಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ರಂಜಿತಾ, ನಿವೃತ್ತ ಮುಖ್ಯಗುರು ನಾರಾಯಣ್ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *