ಪುತ್ತೂರು : ಐತಿಹಾಸಿಕ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಕಂಬಳದ ಹಳೆಯ ಕರೆಯನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿದ್ದು, ಇದೀಗ ಕಂಬಳದ ಬೃಹತ್ ವೇದಿಕೆಯನ್ನು ಕೂಡ ತೆರವುಗೊಳಿಸಲಾಗಿದೆ.

ಇತ್ತೀಚೆಗೆ ಹಳೆಯ ಕರೆಯಲ್ಲಿ ಮಣ್ಣು ತುಂಬಿಸುವ ಮೂಲಕ ಕಂಬಳದ ಪಾರಂಪರಿಕ ಕರೆ ಇತಿಹಾಸದ ಪುಟ ಸೇರಿತ್ತು. ಕರೆಯ ಸ್ಥಳಾಂತರದ ಭಾಗವಾಗಿ ಈಗ ವೇದಿಕೆಯನ್ನೂ ತೆರವುಗೊಳಿಸಲಾಗಿದ್ದು, ಹೊಸ ಕಂಬಳ ಕರೆ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.

ಜನವರಿ 24ರಂದು 33ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳವು ವಿಜೃಂಭಣೆಯಿಂದ ನಡೆದಿತ್ತು. ಅದರ ಬಳಿಕ ಕರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ಥಳಾಂತರ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಆರಂಭಿಕ ಹಂತದಲ್ಲಿ ಹಳೆಯ ಕರೆಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದ್ದು, ಅಲ್ಲಿದ್ದ ಕಂಬಳದ ಗುರುತಾಗಿ ಕರೆಯ ಬದಿಯಲ್ಲಿ ನೀರು ಚಿಮ್ಮಿಸುವ ವ್ಯವಸ್ಥೆಗೆ ಬಳಸಿದ್ದ ಕಂಬ ಮಾತ್ರ ಉಳಿಸಲಾಗಿತ್ತು. ಇದೀಗ ಅದರ ಜೊತೆಗೆ ಕಂಬಳದ ಬೃಹತ್ ವೇದಿಕೆಯನ್ನೂ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.

Leave a Reply

Your email address will not be published. Required fields are marked *