ವಿಷ್ಣು ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ ಗ್ರಾಮ ಸೀಮಿತ 8ನೇ ವರುಷದ ವಿಷ್ಣು ಟ್ರೋಫಿ 2026- 27 ದಿನಾಂಕ ಮಾರ್ಚ್ 29 ರ ಆದಿತ್ಯವಾರ ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕದಲ್ಲಿ ನಡೆಯಲಿದೆ.

ಈ ಪಂದ್ಯಾಟದ ಮೊದಲ ಬಹುಮಾನವಾಗಿ 15000 ನಗದು ಮತ್ತು ವಿಷ್ಣು ಟ್ರೋಫಿ, ದ್ವಿತೀಯ ಬಹುಮಾನವಾಗಿ 10000 ಮತ್ತು ವಿಷ್ಣು ಟ್ರೋಫಿ, ತೃತೀಯ ಬಹುಮಾನವಾಗಿ 5000 ಮತ್ತು ವಿಷ್ಣು ಟ್ರೋಫಿ, ಚತುರ್ಥ ಬಹುಮಾನವಾಗಿ 5000 ಮತ್ತು ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಸವ್ಯಾಸಾಚಿ ಬಹುಮಾನ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.




ಈ ಕಬ್ಬಡಿ ಪಂದ್ಯಾಟದಲ್ಲಿ ವಿಶೇಷ ಗಣ್ಯರೊಂದಿಗೆ ಸಂಭ್ರಮದಿಂದ ನಡೆಯಲಿದೆ. ಕಬ್ಬಡಿ ಪಂದ್ಯಾಟಕ್ಕೆ ಎಲ್ಲಾ ಕ್ರೀಡಾಭಿಮಾನಿಗಳು ಬರೆಬೇಕಾಗಿ ಆಯೋಜಕರ ವಿನಂತಿ.





