ಕಲ್ಲಡ್ಕ : ಇತ್ತೀಚೆಗೆ ನಿಧನರಾದ ಕಲ್ಲಡ್ಕ ಬಿಲ್ಲವ ಸಂಘ ಇದರ ಬೋಳಂತೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ದಿವಂಗತ ಕೂಸಪ್ಪ ಪೂಜಾರಿ( ಮಾಸ್ಟರ್) ರವರಿಗೆ ನುಡಿನಮನ ಕಾರ್ಯಕ್ರಮವು ಬಿಲ್ಲವ ಗ್ರಾಮ ಸಮಿತಿ ಬೋಳಂತೂರು ಹಾಗೂ ಬೋಳಂತೂರು ಗ್ರಾಮಸ್ಥರಿಂದ ಬೋಳಂತೂರು ಗ್ರಾಮ ಪಂಚಾಯತಿನ ಸಭಾಭವನದಲ್ಲಿ ಮಾರ್ಚ್ 22ನೇ ಆದಿತ್ಯವಾರ ಜರಗಿತು.

ವೀರಕಂಬ ಮಜಿ ಶಾಲಾ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಎಸ್ ಕೆ, ಬೋಳಂತೂರು ಪಂಚಾಯತಿನ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ರೈ, ಬಂಟ್ವಾಳ ತಾಲೂಕು ಸಹಕಾರಿ ಪ್ರಕೋಷ್ಟ ಸಂಚಾಲಕ ಜಯರಾಮ್ ರೈ, ಮಹಾಬಲ ರೈ ಹೊಸ ಮನೆ, ನೋಣಯ್ಯ ಜಿಎನ್, ಚೆನ್ನಪ್ಪ ಪೂಜಾರಿ ಗುಂಡಿಮಜಲು ಕೂಸಪ್ಪ ಮಾಸ್ಟರ್ ಬಗ್ಗೆ ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬೋಳಂತೂರು ಗ್ರಾಮ ಬಿಲ್ಲವ ಸಮಿತಿಯ ಗೌರವಾಧ್ಯಕ್ಷ ಸುರೇಂದ್ರ ಅಮೀನ್ , ಕಲ್ಲಡ್ಕ ವಲಯ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಮಹಿಳಾ ಸಮಿತಿಯ ಅಧ್ಯಕ್ಷ ಲಾವಣ್ಯ, ಬಿಲ್ಲವ ಗ್ರಾಮ ಸಮಿತಿಗಳಾದ ಬಾಲ್ತಿಲ, ಬೊಂಡಲ,ವೀರಕಂಬ, ಗೋಳ್ತಾಮಜಲು, ಅಮ್ಟಾರ್ ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬೋಳಂತೂರು ಗ್ರಾಮದ ಕೂಸಪ್ಪ ಪೂಜಾರಿಯವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೂಸಪ್ಪ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಾರಾಯಣ ಟೈಲರ್ ಉತ್ತಮ ನಗರ ಹಾಗೂ ಕೃಷ್ಣಪ್ಪ ಪೂಜಾರಿ ಗುಂಡಿ ಮಜಲು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *