ನಾಗಮಂಡಲದಿಂದ ಕ್ಷೇತ್ರದ ಸಾನಿಧ್ಯ ವೃದ್ಧಿ…ಆರ್ತಿಲ ಕೃಷ್ಣ ರಾವ್.
ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ಸನ್ನಿಧಿಯ ವಠಾರದಲ್ಲಿ ಪ್ರಥಮ ಬಾರಿಗೆ ನಡೆಯುವ ಚತುರ್ ಪವಿತ್ರ ನಾಗಮಂಡಲ ಉತ್ಸವದ ಕಾರ್ಯಾಲಯದ ಉದ್ಘಾಟನೆ ಇಂದು ನೆರವೇರಿತು.

ಕಾರ್ಯಾಲಯವನ್ನು ದೀಪ ಬೆಳಗಿಸಿ, ನಾಳಿಕೆರ ಒಡೆದು ಉದ್ಘಾಟಿಸಿ ಮಾತನಾಡಿದ ಸಹಸ್ರಲಿಂಗೇಶ್ವರ ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ಅರ್ತಿಲ ಕೃಷ್ಣರಾವ್ ಪ್ರಥಮ ಬಾರಿಗೆ ಕ್ಷೇತ್ರದ ವಠಾರದಲ್ಲಿ ನಾಗಮಂಡಲವು ಧಾರ್ಮಿಕ ವಿಧಿ ವಿಧಾನ ದೊಂದಿಗೆ ನಡೆಯುತ್ತಿದ್ದು ಈ ಧಾರ್ಮಿಕ ಕಾರ್ಯಕ್ರಮದಿಂದ ಸಾನಿಧ್ಯ ವೃದ್ಧಿಯಾಗುವುದು ಮತ್ತು ನಾಗಮಂಡಲ ನೋಡಬೇಕೆಂಬ ಭಕ್ತರ ಬಹುವರ್ಷದ ಕನಸು ನನಸಾಗಿದ್ದು ಎಲ್ಲ ಹಿಂದೂ ಬಂಧುಗಳು ಈ ಪವಿತ್ರ ಉತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಬೇಕೆಂದರು. ಹಿಂದೂ ಬಂಧುಗಳಲ್ಲಿ ನಾಗನಿಗೆ ವಿಶೇಷ ಸ್ಥಾನವಿದೆ. ನಾಗನ ಆರಾಧನೆ ಮತ್ತು ಸೇವೆಯಿಂದ ಸುಖ, ಶಾಂತಿ ನೆಮ್ಮದಿಯನ್ನು ನಮ್ಮ ಜೀವನದಲ್ಲಿ ಪಡೆಯಲು ಸಾಧ್ಯ, ಈ ನಂಬಿಕೆಯಿಂದ ನಾವೆಲ್ಲ ಶ್ರದ್ದಾ ಭಕ್ತಿಯ ಜೊತೆಗೆ ನಾಗಮಂಡಲದಲ್ಲಿ ಪಾಲ್ಗೊಳ್ಳಬೇಕೆಂದರು. ನಾಗಮಂಡಲಕ್ಕೆ ಬೇಕಾಗುವ ಹಿಂಗಾರ, ಸಿಯಾಳವನ್ನು ಪ್ರತಿ ಮನೆಯಿಂದ ನೀಡಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರು.

ನಾಗಮಂಡಲ ಸಮಿತಿಯ ಅಧ್ಯಕ್ಷರಾದ ಚಂದಪ್ಪ ಮೂಲ್ಯ ಮಾತನಾಡಿ ನಾಗನ ಸೇವೆಯಲ್ಲಿ ಪಾಲ್ಗೊಳ್ಳುವ ಮತ್ತು ಸೇವೆಯನ್ನು ಮಾಡುವ ಅವಕಾಶ ನಮ್ಮ ಪಾಲಿಗೆ ಭಗವಂತ ಕರುಣಿಸಿದ್ದಾನೆ. ಈ ಪವಿತ್ರವಾಗಿರುವ ಕಾರ್ಯಕ್ರಮದಲ್ಲಿ ಇಡೀ ಹಿಂದೂ ಸಮಾಜ ಪಾಲ್ಗೊಂಡು ಆ ನಾಗನ ದೇವರ ಕೃಪೆಗೆ ಪಾತ್ರರಾಗಬೇಕು ಮತ್ತು ಈ ದಿವಸದಿಂದ ನಡೆಯುವ ಕರೆ ಸೇವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು. ನಾಗಮಂಡಲದ ಚಪ್ಪರದ ಕೆಲಸ ಕಾರ್ಯಗಳು ಮತ್ತು ನಗರದ ಶೃಂಗಾರದ ಕಾರ್ಯಗಳು ಈ ದಿವಸದಿಂದ ಆರಂಭಗೊಳ್ಳಲಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿದರು. ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಕರುಣಾಕರ ಸುವರ್ಣ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ವೆಂಕಪ್ಪ ಪೂಜಾರಿ, ಪಾಕ ತಜ್ಞನಾಗಿರುವ ರವಿ ಕುಂಟಿನಿ, ದೇವಳದ ವೆಂಕಟೇಶ್, ಗುತ್ತಿಗೆದಾರರಾಗಿರುವ ಆನಂದ, ನಾಳಿಕೆರ ಒಡೆದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.ಸಮಿತಿಯ ಪ್ರದಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿ, ಶ್ರೀರಾಮ್ ಭಟ್ ವಂದಿಸಿದರು. ಕಾರ್ಯಾಲಯ ಕಚೇರಿ ಪ್ರಮುಖ್ ವಿಜಿತ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *