ಕಡಬ: ಕಡಬದ ಶ್ರೀ ಗಣೇಶ್ ಬಿಲ್ಡಿಂಗ್‌ನಲ್ಲಿ ವಸಂತ್ ಎನ್. ಕಾಂಚನವರ ಅವರ ‘ಶ್ರೀ ಲಾ ಚೇಂಬರ್’ ವಕೀಲರ ಕಚೇರಿ ಇಂದು ಶುಭಾರಂಭಗೊಂಡಿತು.

ಬೆಳ್ತಂಗಡಿ ವಕೀಲರ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಹಿರಿಯ ವಕೀಲರಾದ ಪ್ರಶಾಂತ್ ಎಂ. ದೀಪ ಬೆಳಗಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಕೀಲರಾದ ವಿನಯ್ ಕುಮಾರ್ ಎಂ., ಕೌಶಿಕ್ ಕೆ.ಟಿ., ಅರ್ಪಿತಾ ಅನಿಲ್ ಉಪಸ್ಥಿತರಿದ್ದರು. ಕಟ್ಟಡದ ಮಾಲಕರಾದ ಸುಂದರ ಗೌಡ ಮಂಡೇಕರ, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್, ನಡ್ಪ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟಿನ ಮಾಜಿ ಅಧ್ಯಕ್ಷ ಶ್ರೀಧರ ಗೌಡ, ಕಾಂಚನ ಸೌಂಡ್ಸ್ ಮಾಲಕರಾದ ಹರೀಶ್ ಊರಾಬೆ, ದಿನೇಶ್ ನಡ್ಪ, ತಾರಾನಾಥ ಭಾಸ್ಕರ ಗೌಡ ನೆಕ್ಕರೆ, ಧನರಾಜ್,ದೇವದಾಸ್ ಮೇಲೂರು, ಸಚಿನ್ ನಡ್ಪ, ಭಾರದ್ವಾಜ್,ಕಡಬ ಕೆಎಸ್‌ಆರ್‌ಟಿಸಿ ಸಂಚಾರಿ ನಿಯಂತ್ರಕರಾದ ಕುಶಾಲಪ್ಪ ಗೌಡ, ಕಡಬ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಯಿಲ, ದಿವಾಕರ ಮುಂಡಾಲ, ಹೀತೇಶ್ ಮಂಡೇಕರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.




ವಕೀಲರ ಮಾತೃಶ್ರೀಯರಾದ ಚೆನ್ನಪ್ಪ ಗೌಡ ಮತ್ತು ಗೀತಾ ನೆಕ್ಕರೆ ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿದರು.





