ಪುತ್ತೂರು: ಮಧ್ಯಪ್ರಾಚ್ಯ ರಾಷ್ಟಗಳಲ್ಲಿ ಯುದ್ಧ ಮುಂದುವರೆದಿರುವುದರಿAದ ಭಾರತದಲ್ಲಿ ಗ್ಯಾಸ್ ಪೂರೈಕೆ ಕುರಿತಂತೆ ವ್ಯತ್ಯಯ ಉಂಟಾಗಿರುವುದರಿ0ದ ಮುಖ್ಯವಾಗಿ ಹೊಟೇಲ್ ಆಹಾರ ಉದ್ಯಮ ಸಂಕಷ್ಟ ಎದುರಿಸುತ್ತಿದೆ. ಅನಿವಾರ್ಯ ಗ್ಯಾಸ್ ಬಳಕೆಗೆ ಪರ್ಯಾಯವಾಗಿ ಪುತ್ತೂರು ನಗರದ ಪ್ರಮುಖ ಹೊಟೇಲ್ ಒಂದರಲ್ಲಿ ಕಂಡುಕೊ0ಡಿರುವ ಮಾರ್ಗ ಇದೀಗ ವಿಶೇಷವಾಗಿ ಗಮನಸೆಳೆಯುತ್ತಿದೆ.
ಕಟ್ಟಿಗೆಯ ಚೂರುಗಳನ್ನು ಬಳಸಿಕೊಂಡು ಬ್ಲೋವರ್ ಮೂಲಕ ಬೆಂಕಿ ಉರಿಸುವ ಸಾಧನವನ್ನು ಜಿಲ್ಲೆಯಲ್ಲೇ ಮೊದಲ ಬಾರಿಗೆ ಎಂಬ0ತೆ ಪುತ್ತೂರು ನಗರದ ಗಣೇಶ್ ಪ್ರಸಾದ್ ಹೊಟೇಲ್ನಲ್ಲಿ ಬಳಸಲು ಆರಂಭಿಸಲಾಗಿದೆ. ಆ ಮೂಲಕ ಅನ್ನ ಸೇರಿದಂತೆ ಪದಾರ್ಥಗಳನ್ನು ಮಿತ ಖರ್ಚಿನಲ್ಲಿ ಬೇಯಿಸಲಾಗುತ್ತಿದೆ.

ಫ್ಯಾನ್ ತಿರುಗಲು ಸ್ವಲ್ಪ ಪ್ರಮಾಣದ ವಿದ್ಯುತ್ ವ್ಯಯವಾಗುತ್ತದೆ. ಸ್ವಲ್ಪ ಕಟ್ಟಿಗೆ ತುಂಡುಗಳು ಅಥವಾ ತೆಂಗಿನ ಚಿಪ್ಪು ಒಲೆಗೆ ಹಾಕಿದರೆ ಗ್ಯಾಸ್ ಮೂಲಕ ಉರಿದಂತೆಯೇ ಉರಿಯುತ್ತದೆ. ಕಟ್ಟಿಗೆಯೂ ಹೆಚ್ಚು ಖರ್ಚಾಗುವುದಿಲ್ಲ. ಒಲೆಯನ್ನು ಇರಿಸಲು ಅಲ್ಪ ಜಾಗ ಸಾಕು. ಈ ವಿಶೇಷ ಒಲೆಯನ್ನು ಪುತ್ತೂರಿನ ಸೋಜಾ ಮೆಟಲ್ ಸಂಸ್ಥೆಯ ಮೂಲಕ ತಯಾರಿಸಲಾಗಿದೆ. ಸುಮಾರು ೧೦ ಸಾವಿರದ ಒಳಗಡೆ ಈ ಒಲೆ ಲಭ್ಯವಾಗುತ್ತದೆ. ಈಗ ಆರಂಭದಲ್ಲಿ ಅನ್ನ, ಎರಡು-ಮೂರು ಬಗೆ ಪದಾರ್ಥವನ್ನು ಬೇಯಿಸಿದ್ದೇವೆ. ಮುಂದೆ ತಿಂಡಿಗಳ ತಯಾರಿಗೂ ಈ ಒಲೆಯನ್ನು ಬಳಸುತ್ತೇವೆ ಎಂದು ಹೊಟೇಲ್ ಮಾಲಕರು ತಿಳಿಸಿದ್ದಾರೆ.







ಗ್ಯಾಸ್ ಅಭಾವದಿಂದ ಕೆಲವು ದಿನಗಳಿಂದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮುಂದಕ್ಕೆ ಏನು ಮಾಡುವುದು ಎಂದು ಚರ್ಚೆ ನಡೆಸುವಾಗ ಸ್ನೇಹಿತ ಜಾನ್ ಮಾಸ್ಟುç ಎಂಬವರು ಕೊಟ್ಟ ಉಪಾಯದಂತೆ ಅವರ ಬೆಂಗಳೂರಿನ ಸ್ನೇಹಿತರಲ್ಲಿ ಒಲೆಯನ್ನು ತರಿಸಿ ಅವರ ಪುತ್ರನ ಮೂಲಕ ಅಭಿವೃದ್ಧಿಪಡಿಸಿ ಇದನ್ನು ತಯಾರಿಸಲಾಗಿದೆ. ಶನಿವಾರ ಪಾರಯೋಗಿಕವಾಗಿ ಎರಡು ಮೂರು ಐಟಂ ಬೇಯಿಸಿದ್ದೇವೆ. ಯಶಸ್ಸು ಕಾಣುತ್ತಿದೆ. ಗ್ಯಾಸ್ಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಈ ವಿಶೇಷ ಒಲೆ ಪ್ರಯೋಜನಕಾರಿಯಾಗಿ ನಮಗೆ ಕಾಣಿಸಿದೆ.
ಗೋಪಾಲಕೃಷ್ಣ ಹೇರಳೆ, ಪುತ್ತೂರು ಗಣೇಶ್ ಪ್ರಸಾದ್ ಹೊಟೇಲ್ ಮಾಲಕರು.
ಗ್ಯಾಸ್ ಕೊರತೆ ನೀಗಿಸಲು ಪರ್ಯಾಯ ವ್ಯವಸ್ಥೆಯನ್ನು ಪುತ್ತೂರಿನವರು ಕಂಡುಕೊAಡಿರುವುದು ಖುಷಿ ಇದೆ. ಹೊಸ ಆವಿಷ್ಕರದ ಕಟ್ಟಿಗೆ ಸ್ಟವ್ ಮಾಡಿದ್ದಾರೆ. ಎಸಿ-ಡಿಸಿ ಕನ್ವರ್ಟ್ ಪ್ಲಗ್ ಇರುವ ಫ್ಯಾನ್ ವ್ಯವಸ್ಥೆ ಮಾಡಿದ್ದಾರೆ. ಒಲೆಗೆ ಕಟ್ಟಿಗೆ ಚೂರು ಹಾಕುತ್ತಾ ಹೋದರೆ ಎಲ್ಪಿಜಿ ಸ್ಟವ್ ಉರಿಯುವಂತೆ ಉರಿಯುತ್ತದೆ. ಇದು ಉಳಿದ ಕಡೆಗಳಲ್ಲೂ ಅನುಕೂಲ ಆಗಬಹುದು. ವಿಕಸಿತ, ಬದಲಾವಣೆಯ ಭಾರತದ ಕುರಿತು ಪ್ರಧಾನಿಯವರು ಹೇಳುವಂತೆ ನಮ್ಮ ಕೊಡುಗೆಯೂ ನೀಡಬಹುದು. ಒಳ್ಳೆಯ ಪ್ರಯತ್ನವನ್ನು ಗೋಪಾಲಕೃಷ್ಣ ಹೇರಳೆ ಅವರು ಆರಂಭಿಸಿದ್ದಾರೆ. ಉಳಿದ ಹೊಟೇಲ್ಗಳಿಗೂ ಇದು ಮಾದರಿಯಾಗಿ ಮುಂದೆ ಬಳಕೆಯಾಗಬಹುದು.
ಆರ್.ಸಿ.ನಾರಾಯಣ, ಹೊಟೇಲ್ ಗ್ರಾಹಕರು


