ಮಂಗಳೂರು ನಗರದ ಅತ್ತಾವರ ಪ್ರದೇಶದಲ್ಲಿ ಸೋಮವಾರ ದುರ್ಘಟನೆ ನಡೆದಿದೆ. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 4ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಿದ್ಯಾರ್ಥಿ ಸಾರ್ಥಕ್ ಮೌರ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ಮೂಲತಃ ಕೋಲ್ಕತ್ತಾದವರಾದ ಸಾರ್ಥಕ್ ಖಾಸಗಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದು, ಸೋಮವಾರ ಮಧ್ಯಾಹ್ನ ತನ್ನ ಗೆಳತಿ ವಾಸಿಸುತ್ತಿದ್ದ ಅತ್ತಾವರದ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಅಪಾರ್ಟ್‌ಮೆಂಟ್ ಪ್ರವೇಶದ ವೇಳೆ ಅವರು ಎಂಟ್ರಿ ಮಾಡಿಕೊಂಡು 12ನೇ ಮಹಡಿಗೆ ಹೋಗಿದ್ದರು.

ಆದರೆ ಗೆಳತಿಯ ಮನೆಯನ್ನು ಸಂಪರ್ಕಿಸುವ ಬದಲು, ವಿರುದ್ದ ದಿಕ್ಕಿಗೆ ತೆರಳಿ ಮೇಲ್ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.

ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪಾಂಡೇಶ್ವರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *