ಕಡಬ: ಕಡಬ ತಾಲೂಕು ಕಡಬ ಗ್ರಾಮದ ಪಿಜಕ್ಕಳ ಪೂಜಾರಿಮನೆ ನಿವಾಸಿಗಳಾದ ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಗಂಗಮ್ಮ ಹಾಗೂ ನಿವೃತ್ತ ರೈಲ್ವೆ ಉದ್ಯೋಗಿ ಶ್ರೀ ಕೃಷ್ಣಪ್ಪ ಗೌಡ ಪಿ ರವರ ಪುತ್ರಿ, ಕಡಬ ಸರಸ್ವತೀ ಶಾಲೆಯ ಶಿಕ್ಷಕಿ ಶ್ವೇತಾ ಅವರ ವಿವಾಹವು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೋಲನಮನೆ ನಿವಾಸಿಗಳಾದ ಶ್ರೀಮತಿ ಪುಷ್ಪ ಹಾಗೂ ದಿವಂಗತ ನಿವೃತ್ತ ಬಿ.ಎಸ್.ಎನ್.ಎಲ್ ಸಿಬ್ಬಂದಿ ಶ್ರೀ ವೀರಪ್ಪ ಗೌಡ ರವರ ಪುತ್ರ ಹರ್ಷಿತ್ ಅವರೊಂದಿಗೆ ನೆರವೇರಿತು.
ವಿವಾಹ ಸಮಾರಂಭವು ಏಪ್ರಿಲ್ 1 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಸಡಗರದಿಂದ ನಡೆಯಿತು. ಬಂಧು-ಬಳಗ, ಸ್ನೇಹಿತರು ಹಾಗೂ ಗಣ್ಯರು ಭಾಗವಹಿಸಿ ನೂತನ ದಂಪತಿಗೆ ಶುಭ ಹಾರೈಸಿದರು.









