ಕಡಬ: ಭಕ್ತಿ ಮತ್ತು ಸೇವೆ ಒಂದಾಗಿದಾಗ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ ಎಂಬುದಕ್ಕೆ ಕಡಬದ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ತನ್ನ ತಂದೆಯ ನೆನಪಿಗಾಗಿ ದೇವಸ್ಥಾನದ ಅಭಿವೃದ್ಧಿಗೆ ₹7 ಲಕ್ಷ ವೆಚ್ಚವನ್ನು ಭರಿಸಿರುವ ಮಂಗಳೂರಿನ ಒಕ್ಕಡಬದ ಉದ್ಯಮಿ ಪ್ರಸಾದ್ ಎನ್.ಕೆ ಅವರ ಕಾರ್ಯ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.





ಕಡಬದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದಲ್ಲಿ ಸಭಾಂಗಣದ ಪಾಕಶಾಲೆಯ ಪುನರ್ ನಿರ್ಮಾಣ ಹಾಗೂ ಭಕ್ತರಿಗೆ ಅಗತ್ಯವಿದ್ದ ಕೈ ತೊಳೆಯುವ ವ್ಯವಸ್ಥೆಯ ಕಾಮಗಾರಿಗಳು ಪ್ರಸ್ತುತ ಭರದಿಂದ ಸಾಗುತ್ತಿವೆ.
ದೇವಸ್ಥಾನ ಸಮಿತಿ ಹಾಗೂ 65ನೇ ವರ್ಷದ ಏಕಹ ಭಜನೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಆರಿಗ ಮತ್ತು ಕಾರ್ಯದರ್ಶಿ ಜಯಂತ್ ಕುತ್ತ್ಯಾಡಿ ಅವರ ನೇತೃತ್ವದಲ್ಲಿ ಈ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸುಮಾರು ₹7 ಲಕ್ಷದ ಸಂಪೂರ್ಣ ವೆಚ್ಚವನ್ನು ಪ್ರಸಾದ್ ಎನ್.ಕೆ ಅವರು ಭರಿಸುತ್ತಿದ್ದಾರೆ.



ಈ ಸೇವೆಯನ್ನು ತಮ್ಮ ತಂದೆ, ಹಿರಿಯ ಧಾರ್ಮಿಕ ಮುಖಂಡರು ಹಾಗೂ ಭಜನಾ ಮಂಡಳಿಯ ಸಕ್ರಿಯ ಪದಾಧಿಕಾರಿಯಾಗಿದ್ದ ದಿವಂಗತ ಕೆ. ನಾರಾಯಣ ಭಂಡಾರಿ ಅವರ ಸ್ಮರಣಾರ್ಥವಾಗಿ ಅರ್ಪಿಸಿದ್ದಾರೆ. ತಂದೆಯ ಭಕ್ತಿ ಹಾಗೂ ಸಮಾಜದ ಮೇಲಿದ್ದ ಕಾಳಜಿಯನ್ನು ಮುಂದುವರಿಸುತ್ತಿರುವ ಪ್ರಸಾದ್ ಅವರ ಈ ನಡೆ ಇಂದಿನ ಪೀಳಿಗೆಗೆ ಹಾಗೂ ಇತರ ದಾನಿಗಳಿಗೆ ಪ್ರೇರಣೆಯಾಗಿದೆ.

