ಮಂಗಳೂರು: ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿ ಸಂಘ ಹಾಗೂ ಎನ್‌ಎಸ್‌ಎಸ್ ಘಟಕದ ವತಿಯಿಂದ ಏಪ್ರಿಲ್ 2, 2026ರಂದು ಉರ್ವಾಸ್ಟೋರ್ ಹಾಗೂ ಜಂಕ್ಷನ್ ಸುತ್ತಮುತ್ತ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಸ್ವಚ್ಛತೆ, ಆರೋಗ್ಯಕರ ಜೀವನಶೈಲಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಪ್ರದೇಶವನ್ನು ಸ್ವಚ್ಛಗೊಳಿಸಿದರು. ತ್ಯಾಜ್ಯ ಸಂಗ್ರಹಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನೂ ಕೈಗೊಂಡರು.

ಕಾರ್ಯಕ್ರಮವನ್ನು ರಾಮಕೃಷ್ಣ ಮಿಷನ್, ಮಂಗಳೂರು ವತಿಯಿಂದ ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪಾಡಿ ಉದ್ಘಾಟಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯತೆಯನ್ನು ವಿವರಿಸಿದರು.
ಮುಳಿಯ ಸಾತ್ವಿಕ್ ಅವರ ಸ್ವಾಗತ ಭಾಷಣದಿಂದ ಕಾರ್ಯಕ್ರಮ ಆರಂಭವಾಗಿ, ಅವರ ಧನ್ಯವಾದಗಳೊಂದಿಗೆ ಸಮಾಪ್ತಿಯಾಯಿತು. ಈ ವೇಳೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆ ಗಮನಸೆಳೆಯಿತು.
ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ, ಟ್ರಸ್ಟಿ ಶ್ರೀಮತಿ ಸುಮನಾ ಪೊಳಲಿ, ಎನ್‌ಎಸ್‌ಎಸ್ ಸಂಯೋಜಕಿ ಶ್ರೀಮತಿ ವಿದ್ಯಾಲಕ್ಷ್ಮಿ ಪಿ. ಶೆಟ್ಟಿ, ಎನ್‌ಎಸ್‌ಎಸ್ ಕಾರ್ಯದರ್ಶಿಗಳಾದ ಪ್ರೀತಮ್, ನಿಶ್ಮಿತಾ, ಚನ್ನಬಸವ ಹಾಗೂ ಅನುಷ್ಕಾ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸಿಂಚನಾ ಮತ್ತು ಕಾರ್ಯದರ್ಶಿ ಸಿಂಧು ಉಪಸ್ಥಿತರಿದ್ದರು.
ಈ ಸ್ವಚ್ಛತಾ ಅಭಿಯಾನವು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ಅವರ ಚುನಾವಣಾ ಘೋಷಣೆಯ ಭಾಗವಾಗಿದ್ದು, ಸಾಮಾಜಿಕ ಸೇವೆ ಮತ್ತು ಜವಾಬ್ದಾರಿಯ ಸ್ಪಷ್ಟ ಪ್ರತಿಬಿಂಬವಾಗಿ ಹೊರಹೊಮ್ಮಿತು.

Leave a Reply

Your email address will not be published. Required fields are marked *