ಉಪ್ಪಿನಂಗಡಿ: ಕಾಲೇಜಿನ ಕ್ಲಾಸ್ ರೂಮ್‌ನಲ್ಲಿ ಇಡಲಾಗಿದ್ದ ವಿದ್ಯಾರ್ಥಿನಿಯ ಮೊಬೈಲ್‌ನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ದಾಖಲಾಗಿದೆ.






ತರಕಾರಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯೊಬ್ಬಳು ಬುಧವಾರ ಕಾಲೇಜಿಗೆ ಬಂದು ತನ್ನ ಬ್ಯಾಗ್ ಅನ್ನು ಕ್ಲಾಸ್ ರೂಮ್‌ನಲ್ಲಿ ಇಟ್ಟು, ತರಗತಿ ಕೊಠಡಿಗೆ ಬಾಗಿಲು ಹಾಕಿ ಇತರ ವಿದ್ಯಾರ್ಥಿಗಳೊಂದಿಗೆ ಪ್ರಾಯೋಗಿಕ ತರಬೇತಿಗಾಗಿ ಲ್ಯಾಬ್‌ಗೆ ತೆರಳಿದ್ದರು. ಈ ನಡುವೆ ಹೊರಗಿನಿಂದ ಬಂದ ವ್ಯಕ್ತಿಯೊಬ್ಬ ತರಗತಿ ಕೊಠಡಿಗೆ ಪ್ರವೇಶಿಸಿ, ಅಲ್ಲಿದ್ದ ಬ್ಯಾಗ್‌ಗಳನ್ನು ಶೋಧಿಸಿ ಅದರಲ್ಲಿದ್ದ ಮೊಬೈಲ್ ಅನ್ನು ಕದ್ದುಕೊಂಡು ಹೋಗಿದ್ದಾನೆ.
ಈ ಕಳವು ಘಟನೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳವಾಗಿರುವ ಮೊಬೈಲ್ ವಿದ್ಯಾರ್ಥಿನಿಯ ತಂದೆಯ ಹೆಸರಿನಲ್ಲಿ ಇದ್ದುದರಿಂದ, ವಿದ್ಯಾರ್ಥಿನಿಯ ತಂದೆಯೇ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.


