ಮಂಜೇಶ್ವರ: ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರವು ಪ್ರತೀ ಚುನಾವಣೆಯಲ್ಲೂ ಕಠಿಣ ಸ್ಪರ್ಧೆ ಕಾಣುವ “ಹಾಟ್ ಸೀಟ್” ಎಂದು ಪರಿಗಣಿಸಲ್ಪಟ್ಟಿದ್ದು, ಈ ಬಾರಿ ಕಮಲ ಅರಳಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.

ಈ ಹಿನ್ನಲೆಯಲ್ಲಿ ತುಳು-ಕನ್ನಡ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಎಣ್ಮಕಜೆ ವ್ಯಾಪ್ತಿಯ ಕಂಡೇರಿ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರವಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಎಲ್‌ಡಿಎಫ್ ಹಾಗೂ ಯುಡಿಎಫ್ ಆಡಳಿತ ವೈಫಲ್ಯದಿಂದ ಕಾಸರಗೋಡಿನ ಜನತೆ ಬೇಸತ್ತಿದ್ದಾರೆ. ಜಿಲ್ಲೆಯಲ್ಲಿ ಇರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ನವ ಕಾಸರಗೋಡಿನ ನಿರ್ಮಾಣಕ್ಕಾಗಿ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮನಾಭ ಭಟ್ ಕಂಡೇರಿ, ಪ್ರದೀಪ್ ಭಟ್ ಕಂಡೇರಿ, ಸಾತ್ವಿಕ್ ಕಂಡೇರಿ, ನಾಲ್ಕನೇ ವಾರ್ಡ್ ಪಂಚಾಯತ್ ಸದಸ್ಯೆ ಪುಷ್ಪಾವತಿ ವಿ. ರೈ, ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾದ ಸ್ವಸ್ತಿಕ್ ಕೆಂಗಣಾಜೆ, ಪ್ರಜ್ವಲ್ ಆರ್.ಕೆ. ದಂಬೆಕಾನ, ವಿನೋದ್ ಕೊಲ್ಯ, ಪ್ರಶಾಂತ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *