ಜ್ಞಾನವಿಕಾಸ ಕಾರ್ಯಕ್ರಮದ ರೂವಾರಿಗಳು ಈ ಕಾರ್ಯಕ್ರಮ ಮೂಲಕ ಅದೆಷ್ಟೋ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸ್ವ ಉದ್ಯೋಗಕ್ಕೆ ಪ್ರೇರಣೆ ಕೊಟ್ಟು ಹೆಣ್ಣನ್ನು ಕುಟುಂಬದ ಶಕ್ತಿಯನ್ನಾಗಿ ಮಾಡಿದ, ಹಾಗೂ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಸಮಾಜದ ಅದೆಷ್ಟೋ ನಿರ್ಗತಿಕರ , ಬಡವರ ಕಣ್ಣೀರನ್ನು ಒರೆಸಿ ಅವರ ಜೀವನ ನಿರ್ವಹಣೆಗೆ ತಿಂಗಳಿಗೆ ಮಾಸಾಶನ,ವಾತ್ಸಲ್ಯ ಕಿಟ್, ವಾತ್ಸಲ್ಯ ಮಿಕ್ಸ್, ವಾಸಿಸಲು ವಾತ್ಸಲ್ಯ ಮನೆಗಳನ್ನು ರಚನೆ ಮಾಡಿ ಅವರಿಗೂ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ದಾರಿಮಾಡಿ ಕೊಟ್ಟ,
ನಮ್ಮೆಲ್ಲರ ಪ್ರೀತಿಯ, ದೇವತಾ ಸ್ವರೂಪಿ,ಮಮತಾಮಯಿ, ವಾತ್ಸಲ್ಯ ಮೂರ್ತಿ ಡಾ.ಹೇಮಾವತಿ ವಿ ಹೆಗ್ಡಡೆ ಅಮ್ಮನವರ ಹುಟ್ಟುಹಬ್ಬದಂದು ಪುತ್ತೂರು ತಾಲೂಕಿನ 80 ಜನ ವಾತ್ಸಲ್ಯ ಪಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲಾಯಿತು..





ತಾಲೂಕಿನ ಯೋಜನಾಧಿಕಾರಿಗಳಾದ ಶಶಿಧರ್ ಸರ್ ಸಾಂಕೇತಿಕವಾಗಿ ಹಣ್ಣು ಹಂಪಲು ವಿತರಣೆ ಮಾಡಿ ವಾತ್ಸಲ್ಯ ಫಲಾನುಭವಿ ಅವರ ಆರೋಗ್ಯ ಕ್ಷೇಮ ವಿಚಾರಿಸಿ ಅಮ್ಮನವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದರು. ತಾಲೂಕಿನ 9 ವಲಯದ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಸೇವಾಪ್ರತಿನಿಧಿಯವರು ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಸಹಕಾರ ನೀಡಿ ಅಮ್ಮನವರ ಹುಟ್ಟು ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಶುಭಾಶಯಗಳನ್ನು ತಿಳಿಸಿದರು.


