ಕಡಬ:
ತಾಲೂಕಿನ 102, ನೆಕ್ಕಿಲಾಡಿ ಗ್ರಾಮದ , ಕೋರಿಯರ್ ಸಮೀಪದಲ್ಲಿರುವ ಕುಮಾರಧಾರಾ ನದಿ ತೀರದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ನಿನ್ನೆ ರಾತ್ರಿಯೆ ಪಂಜೋಡಿ ಸಮೀಪದಿಂದ ಬಂದು ನೀಶಿತ್ ಮಾಯಿಪಾಜೆ ಅವರ ತೋಟಕ್ಕೆ ದಾಳಿ ಮಾಡಿ ತೆಂಗು ಅಡಿಕೆ ಮರ ಹಾಗೂ ಕೊರಿಯರ್ ಹರೀಶ್ ಅವರ ಸುಮಾರು 25ಅಡಿಕೆ ಮರ ಬಾಳೆ ಗಿಡ ನಾಶ ಮಾಡಿ ಕೆರ್ಮಯಿ ತಮಿಳ್ ಕಾಲೋನಿ ಸಮೀಪ ಬೆಳಿಗ್ಗೆ ಕಾಣಿಸಿಕೊಂಡಿತು. ಬಳಿಕ ಕೊರಿಯರ್ ಕುಮಾರ ದಾರ ನದಿಯಲ್ಲಿ ಕಾಣಿಸಿದೆ ಇದೀಗ ನದಿ ಮೆಲ್ಬಾಗದ ಮಾಯಿಪಾಜೆ ಸಮೀಪ ಬಿಡು ಬಿಟ್ಟಿದೆ.
ಒಟ್ಟು 7 ಕಾಡಾನೆಗಳು ಹಾಗೂ ಒಂದು ಮರಿಯನೆ ಗುಂಪಾಗಿ ಸಂಚರಿಸುತಿದೆ .

ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸಂಚಾರಿಗಳಲ್ಲಿ ಆತಂಕ ಉಂಟಾಗುತ್ತಿದ್ದಂತೆ, ವಿಷಯ ತಿಳಿದ ತಕ್ಷಣ ಸುಬ್ರಹ್ಮಣ್ಯ ಹಾಗೂ ಪಂಜ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರಬ್ಬರ್ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಕಾಡಾನೆಗಳ ಚಲನವಲನವನ್ನು ಗಮನಿಸುತ್ತಾ, ಅವುಗಳನ್ನು ಅರಣ್ಯದತ್ತ ಸುರಕ್ಷಿತವಾಗಿ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮುಂದುವರಿದಿದೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆ ನೀಡಿರುವ ಅರಣ್ಯ ಇಲಾಖೆ, ಕಾಡಾನೆಗಳ ಹತ್ತಿರ ಹೋಗಬಾರದು, ಫೋಟೋ ಅಥವಾ ವಿಡಿಯೋ ತೆಗೆದುಕೊಳ್ಳಲು ಯತ್ನಿಸಬಾರದು ಹಾಗೂ ರಾತ್ರಿ ಸಮಯದಲ್ಲಿ ಹೊರಗೆ ಅನಾವಶ್ಯಕ ಸಂಚಾರವನ್ನು ತಪ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದೆ. ಯಾವುದೇ ಅನಾಹುತ ಸಂಭವಿಸಿದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಸ್ಥಳದಲ್ಲಿ ಇನ್ನೂ ಅರಣ್ಯ ಸಿಬ್ಬಂದಿ ನಿಯೋಜನೆಗೊಂಡಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








