ಕಲ್ಲಡ್ಕ : ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ ಇದರ ಗೋಳ್ತಮಜಲು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಬಿಲ್ಲವ ಸಂಘ (ರಿ.) ಕಲ್ಲಡ್ಕ ಇದರ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ಮೋನಪ್ಪ ದೇವಸ್ಯ, ಅಧ್ಯಕ್ಷರಾಗಿ  ಯೋಗೀಶ್ ಪೂಜಾರಿ ಕಲ್ಲಡ್ಕ, ಉಪಾಧ್ಯಕ್ಷರಾಗಿ ರವೀಶ್ ಬಲ್ಲೆಕೋಡಿ, ನಾರಾಯಣ ಬಲ್ಕಟ್ಟ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಳ್ತಮಜಲು, ಜತೆ ಕಾರ್ಯದರ್ಶಿಯಾಗಿ ಜೀವನ್ ದೇವಸ್ಯ, ಪುಷ್ಪರಾಜ್ ನೆಟ್ಲ, ಕೋಶಾಧಿಕಾರಿಯಾಗಿ ವಿನಯ್ ಕೆ. ಸಿ. ರೋಡ್, ಸಂಘಟನಾ ಕಾರ್ಯದರ್ಶಿಯಾಗಿ ವಜ್ರನಾಥ ಮಡ್ಲಮಜಲು ಕ್ರೀಡಾ ಕಾರ್ಯದರ್ಶಿಗಳಾಗಿ ತಿಲಕ್ ಹೊಸೈಮಾರ್, ಹರೀಶ್ ಕೃಷ್ಣಕೋಡಿ, ದಿನೇಶ್ ಕೃಷ್ಣಕೋಡಿ, ಗೌರವ ಸಲಹೆಗಾರರಾಗಿ ರಮೇಶ್ ನೆಟ್ಲ, ವಸಂತ ಟೈಲರ್ ನೆಟ್ಲ, ರಾಜೇಶ್ ಸುವರ್ಣ ಕೃಷ್ಣಕೋಡಿರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ , ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ನಿಯೋಜಿತ ಕೋಶಾಧಿಕಾರಿ ಕಿಶೋರ್ ಕಟ್ಟೆಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *