ಬೆಳ್ತಂಗಡಿ: ವಿಧಿಯಾಟದ ಮುಂದೆ ಯಾರೂ ಅಸಹಾಯಕರೇ ಎಂಬುದಕ್ಕೆ ಬೆಳ್ತಂಗಡಿಯ ಮಂಡತ್ಯಾರಿನಲ್ಲಿ ನಡೆದ ಈ ಅಪಘಾತವೇ ಸಾಕ್ಷಿ. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮತ್ತು ಇಬ್ಬರು ಪುಟ್ಟ ಮಕ್ಕಳ ಮೇಲೆ ನಿಯಂತ್ರಣ ತಪ್ಪಿದ ಓಮ್ನಿ ಕಾರು ಸ್ಕಿಡ್ ಆಗಿ ನುಗ್ಗಿದೆ. ಕಾರಿನ ಚಕ್ರಗಳ ಅಡಿಯಲ್ಲಿ ಸಿಲುಕಿದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಲ್ಲೇ ಇದ್ದ ಇಬ್ಬರು ಪುಟಾಣಿಗಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ. ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಅಲ್ಪ ಅಜಾಗರೂಕತೆ ವಹಿಸಿದರೂ ಇಂತಹ ಘೋರ ಅನಾಹುತಗಳು ಸಂಭವಿಸುತ್ತವೆ ಎಂಬುದಕ್ಕೆ ಈ ಸಿಸಿಟಿವಿ ದೃಶ್ಯವೇ ಸಾಕ್ಷಿ.

Leave a Reply

Your email address will not be published. Required fields are marked *