ಪುತ್ತೂರು ಎ.10ಕ್ಕೆ ಬಿಡುಗಡೆಗೊಂಡಿರುವ `90 ಎಂಎಲ್’ ತುಳು ಚಲನಚಿತ್ರಕ್ಕೆ ತುಳುನಾಡಿನ ಪ್ರೇಕ್ಷಕರು ಭರ್ಜರಿ ಮೆಚ್ಚುಗೆ ನೀಡಿದ್ದಾರೆ ಎಂದು ಚಿತ್ರದ ನಾಯಕ ನಟ ವಿನೀತ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಚಲನಚಿತ್ರ ಬಿಡುಗಡೆಗೆ ಮುಂದೆ ನಾವು ಮಾದ್ಯಮದ ಮೂಲಕ ಚಿತ್ರದ ವಿಚಾರ ಮುಂದಿಡುತ್ತಿದ್ದೆವು. ಆದರೆ ನಾವು ಚಿತ್ರ ಬಿಡುಗಡೆಗೊಂದ ಬಳಿಕ ಪ್ರೇಕ್ಷರಿಂದ ಅದಕ್ಕೆ ಹೇಗೆ ಪ್ರತಿಕ್ರಿಯೆ ಸಿಕ್ಕಿದೆ ಎಂಬುದನ್ನು ನೋಡಿ ಅವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಾಗ ನಾವು ಅದರ ಪ್ರಚಾರಕ್ಕೆ ಹೊರಟ್ಟಿದ್ದೇವೆ. ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ತಿಳಿಸಿದರು.

ಡಿ.ಡಿ. ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರಂಜಿತ್ ಸಿ. ಬಜಾಲ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಯಾಕೆ ಕುಡಿಯಬಾರದು ಎಂಬುದನ್ನು ಹೃದಯವನ್ನು ಮುಟ್ಟುವಂತೆ ತೋರಿಸಿದ್ದೇವೆ. ಇದರಲ್ಲಿ ಕಥೆಯೇ ನಗಿಸುತ್ತದೆ ಮತ್ತು ನೊಂದುಕೊಳ್ಳುವಂತೆ ಮಾಡುತ್ತದೆ. ಒಟ್ಟಿನಲ್ಲಿ ಕುಟುಂಬ ಸಮೇತವಾಗಿ ನೋಡಬಹುದಾದ ಹಾಸ್ಯಭರಿತ ಮನರಂಜನಾ ಕಥೆಯನ್ನು ನೀಡಿದ್ದೇವೆ. ಜನ ಅದನ್ನು ಖುಷಿಯಿಂದ ಸ್ವೀಕರಿಸಿದ್ದಾರೆ ಎಂಬುದು ನಮಗೆ ಸಂತೋಷ ತಂದಿದೆ ಎಂದರು. ಚಿತ್ರದಲ್ಲಿ ನಾನು ನಾಯಕ ನಟನಾಗಿ ಹಾಗೂ ಪುತ್ತೂರಿನ ರುಹಾನಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ನಮಿತಾ, ಶೈಲಾಶ್ರೀ ಹಾಗೂ ಧೃತಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ನಟಿಸಿದ್ದಾರೆ ಎಂದ ಅವರು
ಡೋಲ್ಸಿ ಡಿ ಸೋಜ ನಿರ್ಮಾಣದ ಈ ಚಿತ್ರಕ್ಕೆ ರಂಜಿತ್ ಸಿ. ಬಜಾಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವಿದೆ. ತುಳಸಿದಾಸ್ ಮಂಜೇಶ್ವರ್ ಸಂಭಾಷಣೆ ಬರೆದಿದ್ದು, ಸೃಜನ್ ಕುಮಾರ್ ತೋನ್ಸೆ ಸಂಗೀತವಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ರಂಜಿತ್ ಬಜಾಲ್, ನಟ ರೋಶನ್ ಶೆಟ್ಟಿ, ಜಿತೇಶ್, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *