ಕಡಬ *ಕಡಬ ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಪಿಜಕ್ಕಳ- ಕಡಬ ಟ್ರಸ್ಟ್-(ರಿ) ಇದರ ವತಿಯಿಂದ. ಎ.15ರಂದು ವಿಷು ಪೂಜೆ,ನಿಶಿಪೂರ್ಣ ಭಜನೆ, ಸಾಯಂಕಾಲ ಭಜನೋತ್ಸವ, ಸತ್ಯನಾರಾಯಣ ದೇವರ ಪೂಜೆ, ರಂಗ ಪೂಜೆ ನಡೆಯಲಿದೆ.
ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ 6.30 ಕ್ಕೆ ಸರಿಯಾಗಿ ದೇವಸ್ಥಾನದ ಅರ್ಚಕರಾದ ಡಾ. ಮೋಹನ್ ರಾವ್ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು

ಈ ಸಂದರ್ಭದಲ್ಲಿ ಶ್ರೀಮಹಾವಿಷ್ಣು ಭಜನಾ ಮಂಡಳಿ ಅಧ್ಯಕ್ಷರಾದ ಸುಂದರ ಗೌಡ ಪಿಜಕ್ಕಳ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಅಮೈ,ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಪೂಜಾರಿಮನೆ, ದಾರ್ಮಿಕ ಮುಂದಾಳು ಸುಂದರ ಗೌಡ ಮಂಡೆಕರ, ಪುರಂದರ ರೈ ಪಿಜಕ್ಕಳ, ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ಪಿ, ಪ್ರಮುಖರಾದ ಸುಂದರ ಗೌಡ ಪಿ.ಎಮ್, ಅಶ್ವತ್ ಪಿ, ಪ್ರಭಾಕರ ಕೆ.ಎಸ್,ಶೇಖರ ಪಿ,ವೆಂಕಟೇಶ ಅಲಂಗೂರು,ಸುಂದರ ಪೂಜಾರಿ ಅಮೈ, ಕಿರಣ್ ,ಕುಶಾಲಪ್ಪ ನಾಯ್ಕ ಕೊರತ್ತಿಗುರಿ,ಮತ್ತಿತರರು ಉಪಸ್ಥಿತರಿದ್ದರು.


