ರಾಜ್ಯದಲ್ಲಿ ಕಳೆದ ೨೦೨೪-೨೫ನೇ ಸಾಲಿಗೆ ಸಂಬAಧಿಸಿದ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ರೈತರಿಗೆ ಪರಿಹಾರ ಸಿಕ್ಕಿರುವುದು ಅಲ್ಪ ಮೊತ್ತ ಅದರಲ್ಲೂ ತಾಲೂಕಿನ ಆರು ಗ್ರಾಮಗಳ ರೈತರಿಗೆ ಬಿಡಿಗಾಸು ಸಿಕ್ಕಿಲ್ಲ, ಇದರ ವಿರುದ್ಧ ಎಪ್ರಿಲ್ ೨೧ ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ರಮಾನಂದ ಎಣ್ಣೆಮಜಲು ಹೇಳಿದರು.

ಅವರು ಶುಕ್ರವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೈತರಿಗಾಗಿರುವ ಅನ್ಯಾಯದ ವಿರುದ್ಧ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ ನೇತೃತ್ವದಲ್ಲಿ ಜಾತ್ಯಾತೀ ಹಾಗೂ ಪಕ್ಷಾತೀತ ನೆಲೆಯಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರೈತರಿಗೆ ವಿಮಾ ಪರಿಹಾರ ಮೊತ್ತ ಪಾವತಿಸುವ ಸಂದರ್ಭದಲ್ಲಿ ಅನ್ಯಾಯವಾಗಿರುವ ಬಗ್ಗೆ ಈಗಾಗಲೇ ತಾಲೂಕು ಕಛೇರಿ ಮುಂಭಾಗದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ಸಲ್ಲಿಸಲಾಗಿದೆ. ಇದರಿಂದಾಗಿ ಕೆಲವು ಗ್ರಾಮಗಳ ರೈತರ ಖಾತೆಗೆ ಅಲ್ಪ ಸ್ವಲ್ಪ ಹಣ ಜಮೆಯಾಗಿದೆ. ಆದರೂ ಕಡಬ ತಾಲೂಕಿನ ಇಚ್ಲಂಪಾಡಿ, ಕೌಕ್ರಾಡಿ, ನೆಲ್ಯಾಡಿ, ಕೊಣಾಲು, ಗೋಳಿತೊಟ್ಟು ಹಾಗೂ ಆಲಂತಾಯ ಗ್ರಾಮಗಳ ಸುಮಾರು ೨೦೦೦ ಕ್ಕೂ ಅಧಿಕ ರೈತರಿಗೆ ಇದೂವರೆಗೂ ಬಿಡಿಗಾಸು ಕೂಡ ಜಮೆಯಾಗದಿರುವುದಿಲ್ಲ. ಈ ಬಗ್ಗೆ ನಮ್ಮಲ್ಲಿ ದಾಖಲೆ ಇದೆ. ಇದೇ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸದನದಲ್ಲಿ ತೋಟಗಾರಿಕಾ ಸಚಿವರಿಗೆ ಕೇಳಿದ ಪ್ರಶ್ನೆಗೆ ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಿದ ಒಟ್ಟು ೧೦ ದೂರುಗಳು ಬಂದಿರುತ್ತದೆ ಎಂದು ತಿಳಿಸಿರುತ್ತಾರೆ. ಬೆಳೆ ವಿಮೆ ಬಾರದೇ ಇರುವ ರೈತರು ಎಪ್ರಿಲ್ ೨೧ ರಂದು ಕಡಬ ತಾಲೂಕು ಕಛೇರಿ ಮುಂಬಾಗದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ತಾವು ಪಾವತಿಸಿದ ಬೆಳೆ ವಿಮೆಯ ಅರ್ಜಿ ಸಂಖ್ಯೆ ನಮೂದಿಸಿ ವೈಯಕ್ತಿಕವಾಗಿ ಮನವಿ ಮಾಡಬೇಕೆಂದು ವಿನಂತಿಸಿದ ರಮಾನಂದ ಎಣ್ಣೆಮಜಲು ಮನವಿ ಸಲ್ಲಿಸಿದ ಎಲ್ಲಾ ರೈತರಿಗೆ ವಿಮಾ ಪರಿಹಾರ ಮೊತ್ತ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಹೋರಾಟವನ್ನು ತೀವೃಗೊಳಿಸಲಾಗುವುದು, ವಿಮಾ ಮೊತ್ತ ಪಾವತಿಸುವಲ್ಲಿ ಅನ್ಯಾಯ ವೆಸಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಅವರು ಅಗ್ರಹಿಸಿದರು.
ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ಪ್ರಮುಖ್ ಕುಶಾಲಪ್ಪ ಅನಿಲ, ದಿವ್ಯೇಶ್ ಗೌಡ ಕಲ್ಯ, ನಾಗೇಶ್ ನಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *